ಗದಗ: ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗೆ (ಕೆ.ಡಿ.ಪಿ) ಅಧಿಕಾರೇತರ ಸದಸ್ಯರ ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಡಿ.ಆರ್. ಪಾಟೀಲ, ಎಸ್. ಎನ್. ಬಳ್ಳಾರಿ, ಪ್ರಭು ವಿ. ಮೇಟಿ, ಎಸ್.ಡಿ. ಮಕಾನದಾರ ಹಾಗೂ ಶಾರದಾ ಹಿರೇಗೌಡ್ರ ಅವರನ್ನು ಗದಗ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಮಿತಿಗೆ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧಿಕಾರೇತರ ಸದಸ್ಯರರನ್ನಾಗಿ ನಾಮ ನಿರ್ದೇಶನಗೊಳಿಸಿ ಆದೇಶಿಸಿದೆ.
ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿನಾಥ ಈ ಆದೇಶ ಹೊರಡಿಸಿದ್ದಾರೆ.