ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದೂ ಮಹಾಗಣಪತಿ ನೃತ್ಯ, ಸಂಗೀತ ವೈಭವ ಇಂದು

Published : 21 ಸೆಪ್ಟೆಂಬರ್ 2024, 16:32 IST
Last Updated : 21 ಸೆಪ್ಟೆಂಬರ್ 2024, 16:32 IST
ಫಾಲೋ ಮಾಡಿ
Comments

ಗದಗ: ‘ಮೂರನೇ ವರ್ಷದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಅಂಗವಾಗಿ ಧರ್ಮಸಭೆ, ನೃತ್ಯ ಮತ್ತು ಸಂಗೀತ ಹಾಗೂ ಸನ್ಮಾನ ಕಾರ್ಯಕ್ರಮ ಭಾನುವಾರ ನಗರದ ಕಾಟನ್‌ ಮಾರುಕಟ್ಟೆಯಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ಅಧ್ಯಕ್ಷ ಎಸ್‌.ಎಚ್‌.ಶಿವನಗೌಡರ ತಿಳಿಸಿದರು.

‘ಮೂರನೇ ವರ್ಷದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ಹಿನ್ನೆಲೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮಂಗಳೂರಿನ ಹೆಜ್ಜೆನಾದ ತಂಡದಿಂದ ನೃತ್ಯ ಮತ್ತು ಸಂಗೀತ ವೈಭವ ಕಾರ್ಯಕ್ರಮ ನೆರವೇರುವುದು. ಅನ್ನದಾನೀಶ್ವರಮಠ ಶ್ರೀಗಳು ಧರ್ಮೋಪದೇಶ ನೀಡಲಿದ್ದಾರೆ’ ಎಂದು ಶನಿವಾರ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ದಾನಿಗಳಿಗೆ ಹಾಗೂ ಗಣ್ಯರಿಗೆ ಸನ್ಮಾನ ಏರ್ಪಡಿಸಲಾಗಿದೆ. ರಂಗೋಲಿ ಸ್ಪರ್ಧೆ, ಚದುರಂಗ, ವೇಷಭೂಷಣ ಸ್ಪರ್ಧೆ, ಮಹಿಳೆಯರ ಮ್ಯಾಚಿಂಗ್ ಸ್ಪರ್ಧೆ, ಸ್ಮರಣಶಕ್ತಿ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಪ್ರಶಸ್ತಿ ವಿತರಿಸಲಾಗುವುದು’ ಎಂದರು.

ಸುಧೀರ್‌ ಖಾಟಗೆ ಮಾತನಾಡಿ, ‘ಸೆ.24ರಂದು ಬೆಳಿಗ್ಗೆ 10.30ಕ್ಕೆ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಉಚಿನ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ನಡೆಯಲಿದೆ. ಸೆ.25ರಂದು ಬೆಳಿಗ್ಗೆ 9ಕ್ಕೆ ಸತ್ಯನಾರಾಯಣ ಪೂಜೆ ಮತ್ತು ಬೃಹತ್‌ ರಕ್ತದಾನ ಶಿಬಿರ ನಡೆಯಲಿದೆ. ಸೆ.26ರಂದು ಸಂಜೆ 5ಕ್ಕೆ ಗಣಪತಿಗೆ 21 ದಿನ ಪೂಜಿಸಿದ ಹಣ್ಣು ಹಂಪಲ, ಅಂತರಕಾಯಿ, ಬಂಗಾರ, ಬೆಳ್ಳಿ ಆಭರಣಗಳು ಸವಾಲು ಕಾರ್ಯಕ್ರಮ ನಡೆಯಲಿದೆ. ಸೆ.27ರಂದು ಬೆಳಿಗ್ಗೆ 9ಕ್ಕೆ ಸಾಂಸ್ಕೃತಿಕ ಮೇಳದೊಂದಿದೆ ಭೀಷ್ಮ ಕೆರೆಯಲ್ಲಿ ಗಣಪತಿ ವಿಸರ್ಜನೆ ಮಾಡಲಾಗುವುದು’ ಎಂದು ತಿಳಿಸಿದರು.

ರಮೇಶ ಸಜ್ಜಗಾರ ಮಾತನಾಡಿ, ಉಚಿತ ಚಿಕಿತ್ಸೆ ಪಡೆಯುವರು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಬರಬೇಕು ಎಂದು ತಿಳಿಸಿದರು.

ಅಶ್ವಿನಿ ಜಗತಾಪ, ವಂದನಾ ವರ್ಣೇಕರ, ರಾಘವೇಂದ್ರ ಹಬೀಬ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT