ಶಿರಹಟ್ಟಿ: ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಜ.22ರಂದು ಜರುಗುವ ಬೃಹತ್ ಹಿಂದೂ ಸಮಾವೇಶ ಕರಪತ್ರ ಬುಧವಾರ ಬಿಡುಗಡೆಗೊಳಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮರಡ್ಡಿ ಮರಡ್ಡಿ ಮಾತನಾಡಿ, ‘ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಬೆಳ್ಳಟ್ಟಿ ಗ್ರಾಮದಲ್ಲಿ ಬೃಹತ್ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಂಜೆ 4ಕ್ಕೆ ಭವ್ಯ ಶೋಭಾಯತ್ರೆ ನಡೆಯಲಿದ್ದು, ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಸಂಜೆ 5ಕ್ಕೆ ಗ್ರಾಮದ ಭೀಮರಡ್ಡಿ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

ಬನ್ನಿಕೊಪ್ಪ ಮಠದ ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ರಾಮಲಿಂಗೇಶ್ವರ ಮಠದ ಬಸವರಾಜ ಸ್ವಾಮೀಜಿ ಕಾರ್ಯಕ್ರಮ ಸಾನ್ನಿಧ್ಯ ವಹಿಸುವರು. ನಾಗಪುರದ ಅಖಿಲ ಭಾರತೀಯ ಸಂಘಟನಾ ಮಂತ್ರಿ ಶಂಕರಾನಂದ ಜೀ ದಿಕ್ಸೂಚಿ ಭಾಷಣ ನೆರವೇರಿಸುವರು. ರಾಜೇಂದ್ರಕುಮಾರ ಹಲಗಲಿ ಅಧ್ಯಕ್ಷತೆ ವಹಿಸುವರು ಎಂದರು.

ರಾಜೇಂದ್ರಕುಮಾರ ಹಲಗಲಿ, ಮೋಹನ ಗುತ್ತೆಮ್ಮನವರ, ಶಿದ್ರಾಮಪ್ಪ ಮೊರಬದ, ಶಿವಲಿಂಗ ಆಡರಕಟ್ಟಿ, ಮಹೇಶ ಬಡ್ನಿ, ಕೊಟ್ರೇಶ ಸಜ್ಜನರ, ಪ್ರಶಾಂತ ಕೋಡಿಹಳ್ಳಿ, ಶಂಕರ ಬಡಿಗೇರ, ಹೇಮಂತರಡ್ಡಿ ಮರಡ್ಡಿ, ಫಕ್ಕೀರಡ್ಡಿ ಮರಡ್ಡಿ, ಅಣ್ಣಪ್ಪ ಗುತ್ತೆಮ್ಮನವರಣ, ಗೌತಮ ಹಳ್ಳೆಮ್ಮನವರ, ಆನಂದ ಸತ್ತೆಮ್ಮನವರ, ಕೋಟೇಶ ಪೂಜಾರ, ವೀರೇಶ ಕುರವತ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.