ಹದಲಿ-ಮದುಗುಣಿಕಿ ಜಾಕ್ವೆಲ್ ಹದಲಿ-ಗಂಗಾಪೂರ ಜಾಕ್ವೆಲ್ ನಿರ್ವಹಣೆಗೆ ಅನುದಾನದ ಕೊರತೆ ಇದೆ. ಜತೆಗೆ ಉಳಿದ ಎಂಟು ಜಾಕ್ವೆಲ್‌ಗಳ ಪೈಪಲೈನ್ ಸಂಪೂರ್ಣ ಬದಲಾವಣೆಗಾಗಿ ಅನುದಾನ ಇದೆ. ಆದರೆ ಟೆಂಡರ್ ಹಾಕಲು ಯಾರು ಮುಂದೆ ಬರುತ್ತಿಲ್ಲ. ಇದರಿಂದ ಎಲ್ಲ ಜಾಕ್ವೆಲ್‌ಗಳು ಬಂದ್ ಆಗಿವೆ.
–ಎಂ.ಎಸ್.ಓಲೇಕಾರ ಎಇಇ ಕರ್ನಾಟಕ ನೀರಾವರಿ ನಿಗಮ ನಿಯಮಿತ ನರಗುಂದ
ರೈತರ ವಿಚಾರವಾಗಿ ಸರ್ಕಾರದ ನಿರ್ಲಕ್ಷ್ಯ ಹೆಚ್ಚಾಗಿದೆ. ಕಳೆದ ವರ್ಷ ಕೂಡ ಬೆಳೆ ನಾಶಗೊಂಡಿದೆ. ಈ ವರ್ಷವೂ ಹಾನಿ ನಿಶ್ಚಿತ ಎಂಬಂತೆ ಭಾಸವಾಗುತ್ತಿದೆ. ಸರ್ಕಾರ ಜನಪ್ರತಿನಿಧಿಗಳು ರೈತರ ಕಷ್ಟಗಳಿಗೆ ಸ್ಪಂದಿಸಬೇಕು.
–ಎಸ್.ಎಸ್.ಪಾಟೀಲ ಜಿಲ್ಲಾಧ್ಯಕ್ಷ ಭಾರತೀಯ ಕಿಸಾನ್ ಸಂಘ ನರಗುಂದ