ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಂಬಳ ಗ್ರಾಮದಲ್ಲಿ ಹದವಾದ ಮಳೆ ಜನ ಹರ್ಷ

Published 18 ಮೇ 2024, 13:53 IST
Last Updated 18 ಮೇ 2024, 13:53 IST
ಅಕ್ಷರ ಗಾತ್ರ

ಡಂಬಳ: ಕಳೆದ ಎರಡು ಮೂರು ದಿನದಿಂದ ಜಿಟಿಜಿಟಿ ಮಳೆ ಆದ ಪರಿಣಾಮ ಮತ್ತು ಶನಿವಾರ ಮಧ್ಯಾಹ್ನ ಸತತ ಒಂದು ಗಂಟೆಯ ಕಾಲ ಸುರಿದಿದ್ದರಿಂದ ಬಿಸಿಲಿನ ತಾಪಮಾನ ಸ್ವಲ್ಪ ಕಡಿಮೆಯಾಗಿದೆ. ಡಂಬಳದಲ್ಲಿನ ಗ್ರಾಮದಲ್ಲಿ ಸಾಧಾರಣ ಮಳೆ ಆಗಿದೆ.

ಡಂಬಳ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಮೂರು ಗಂಟೆಯಿಂದ ನಾಲ್ಕು ಗಂಟೆಯವರಿಗೆ ಉತ್ತಮವಾಗಿ ಮಳೆ ಸುರಿಯಿತು. ಐದರಿಂದ ಹತ್ತು ನಿಮಿಷಗಳ ಕಾಲ ಜಿಟಿ ಜಿಟಿಯಿಂದ ಪ್ರಾರಂಭವಾದ ಮಳೆ ನಂತರ ಜೋರಾಗಿ ಸುರಿಯಿತು. ಗುಡುಗು ಸಿಡಿಲು ಮಿಂಚು ಸಮೇತ ವೇಗವಾದ ಗಾಳಿಯೊಂದಿಗೆ ಮಳೆ ಪ್ರಾರಂಭವಾಯಿತು.

ಜೋರಾದ ಮಳೆಯಲ್ಲೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಅಗತ್ಯ ಪೂರ್ವ ತಯಾರಿ ಮಾಡಲು ಜಮೀನುಗಳಿಗೆ ಹೋಗಿದ್ದ ರೈತರು ಕೂಲಿ ಕಾರ್ಮಿಕರು ಹಾಗೂ ಇತರರು ಮಳೆಯಲ್ಲಿಯೇ ತೋಯಿಸಿಕೊಂಡು ಮನೆಗೆ ವಾಪಸ್ ಹೋಗುತ್ತಿದ್ದ ಚಿತ್ರಣ ಸಾಮಾನ್ಯವಾಗಿ ಕಂಡು ಬಂತು.

ಬಿಸಿಲಿನ ತಾಪಮಾನ ಹಾಗೂ ಸೆಕೆಯ ಪರಿಣಾಮ ತತ್ತರಿಸಿದ್ದ ಜನತೆಗೆ ಸ್ವಲ್ಪ ನೆಮ್ಮದಿ ನೀಡಿದಂತೆ ಆಗಿದೆ. ಜೋರಾದ ಮಳೆಯಲ್ಲಿಯೇ ಸ್ಥಳೀಯ ಜಗದ್ಗುರು ತೋಂಟದಾರ್ಯ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಮಳೆಯಲ್ಲೆ ತೋಯಿಸಿಕೊಂಡು ಹೋಗುವ ಚಿತ್ರಣ ಕಂಡುಬಂತು.

ವಾರದಲ್ಲಿ ಎರಡು ದಿನ ಸಾಧಾರಣ ಮಳೆಯಾಗಿದ್ದರಿಂದ ಮತ್ತು ಶನಿವಾರ ದಿವಸ ಹದವಾದ ಮಳೆ ಆಗಿದ್ದರಿಂದ ರೈತ ಸಮೂಹಕ್ಕೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆ ಆಗುವ ನಿರೀಕ್ಷೆ ಹೊಂದಿದ್ದಾರೆ.

ಡಂಬಳ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಉತ್ತಮವಾಗಿ ಮಳೆ ಸುರಿಯಿತು
ಡಂಬಳ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಉತ್ತಮವಾಗಿ ಮಳೆ ಸುರಿಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT