ಶಿರಹಟ್ಟಿ: ‘ಜ್ಞಾನವೆಂಬ ಚಿಕ್ಕದೀಪವನ್ನು ನಿಮ್ಮ ಮಸ್ತಕ ಹಾಗೂ ಹೃದಯದೊಳಗೆ ಬೆಳೆಸಿಕೊಂಡರೆ ಅಜ್ಞಾನವೆಂಬ ಕತ್ತಲೆ ತಾನೇ ಓಡಿ ಹೋಗುತ್ತದೆ’ ಎಂದು ಜ.ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಸ್ಥಳೀಯ ಎಸ್ಎಫ್ಸಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ 2025-26ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ 23ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು, ವಿದ್ಯಾರ್ಥಿಗಳು ತಮ್ಮ ತಲೆಯಲ್ಲಿನ ಅಜ್ಞಾನ ತೊಳೆದು ಹಾಕಿದಾಗ ಮನೆಗೆ ಮಗುವಾಗಿ, ಊರಿಗೆ ಉಪಕಾರಿಯಾಗಿ ವಿಶ್ವಕ್ಕೆ ದೀಪವಾಗಬಹುದು. ಹೀಗೆ ಸಂಸ್ಕಾರದಿಂದ ಕಲಿತ ವಿದ್ಯೆ, ಜ್ಞಾನದ ಜ್ಯೋತಿ ಎಂದಿಗೂ ಆರುವುದಿಲ್ಲ. 84 ಲಕ್ಷ ಜೀವರಾಶಿಗಳಲ್ಲಿ ಮನುಷ್ಯ ಮಾತ್ರ ಹುಟ್ಟಿದ ಮೇಲೆ ವಿದ್ಯೆ ಕಲಿಯುತ್ತಾನೆ ಎಂಬುದು ಮನುಷ್ಯ ಭೂಮಿಗೆ ಪಡೆದುಕೊಂಡ ಬಂದ ವಿಶೇಷ ಗುಣ ಎಂದರು.

ವಿದ್ಯೆಗಳಲ್ಲಿ ಎರಡು ವಿಧಗಳಿದ್ದು, ವಿಶ್ವಕ್ಕೆ ಮಾದರಿಯಾಗುವ ಒಂದು ವಿದ್ಯೆಯಾದರೆ, ವಿದ್ವಂಸಕ ಕೃತ್ಯ ಎಸಗುವ ಇನ್ನೊಂದು ಕೆಟ್ಟ ವಿದ್ಯೆಯೂ ಇದೆ. ಹಾಗಾಗಿ ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದೊಂದಿಗೆ ಉತ್ತಮ ಶಿಕ್ಷಣ ಕಲಿತು ದೇಶಕ್ಕೆ ಉತ್ತಮ ಪ್ರಜೆಯಾಗಬೇಕು ಎಂದು ತಿಳಿಸಿದರು.

ಮಕ್ಕಳ ವಿದ್ಯೆ ಹಾಗೂ ವ್ಯಕ್ತಿತ್ವ ಬೆಳೆವಣಿಗೆಗೆ ಶಿಕ್ಷಕರ ಪಾತ್ರಕ್ಕೆ ಸಮನಾಗಿ ಪಾಲಕರ ಪಾತ್ರವು ಇದೆ. ಮಕ್ಕಳು ದುಶ್ವಟ ಹಾಗೂ ಓದಿನ ಸಮಯದಲ್ಲಿ ಮೊಬೈಲ್, ಟಿ.ವಿಗಳಿಂದ ದೂರವಿಡಬೇಕು. ಅವರ ಬಗ್ಗೆ ಸದಾ ಕಾಳಜಿ ವಹಿಸಬೇಕಿದ್ದು, ಇಲ್ಲವಾದರೆ ವಿಶ್ವಕ್ಕೆ ಕಂಠಕವಾಗುತ್ತಾರೆ. ಉತ್ತಮ ಸಂಸ್ಕಾರದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಮಕ್ಕಳಿಗೆ ಎಂದೂ ಆರದ ಜ್ಞಾನದ ದೀಪ ಹಚ್ಚುತ್ತಿರುವ ಪ್ರಸ್ತುತ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಡಿಡಿಪಿಐ ಆರ್.ಎಸ್.ಬುರಡಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ, ಶಿವಪ್ರಕಾಶ ಮಹಾಜಶೆಟ್ಟರ, ಕೆ.ಎ.ಬಳಿಗೇರ, ರತ್ನಾ ಬದಿ, ಎಂ.ಕೆ.ಲಮಾಣಿ, ಬಿ.ಎಸ್.ಹಿರೇಮಠ, ಸಿ.ಪಿ.ಕಾಳಗಿ, ಡಾ.ಸುನೀಲ ಬುರಬುರೆ, ಪ್ರಾಚಾರ್ಯ ಮಂಜುನಾಥ ನೇಮಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.