ಮಂಗಳವಾರ, ಸೆಪ್ಟೆಂಬರ್ 21, 2021
21 °C
ಗದಗ- ಬೆಟಗೇರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ಗದಗ: ಜನೋಪಯೋಗಿ ಕಾರ್ಯಕ್ಕೆ ಮುಂದಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಸಾಮಾಜಿಕ ಸೇವಾ ಸಂಘಟನೆಗಳು ಜನೋಪಯೋಗಿ ಮತ್ತು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಡಾ. ರವಿ ನಾಡಗೇರ ಅಭಿಪ್ರಾಯಪಟ್ಟರು.

ನಗರದ ಲಯನ್ಸ್ ಕಟ್ಟಡದಲ್ಲಿ ನಡೆದ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದರು.

‘ಲಯನ್ಸ್‌ ಕ್ಲಬ್‍ ಸೇರಿದ ಸದಸ್ಯರು ಜನಸೇವೆ ಹಾಗೂ ಸಮಾಜ ಸೇವೆಗೆ ಮುಂದಾಗಬೇಕು. ಸಾಮಾಜಿಕ ಸೇವೆಯಿಂದ ಸಂತೃಪ್ತಭಾವ ಕಾಣಬೇಕು’ ಎಂದು ಸಲಹೆ ನೀಡಿದರು.

ಮಾಜಿ ಜಿಲ್ಲಾ ಗವರ್ನರ್‌ ಆನಂದ ಪೋತ್ನಿಸ್, ಲಯನ್ಸ್ ಕ್ಲಬ್‍ನ ಸದಸ್ಯರು ಕ್ಲಬ್‍ನ ಧ್ಯೇಯ, ಧೋರಣೆಗಳನ್ನು ಅರಿತು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.

ಗದಗ ಬೆಟಗೇರಿ ಲಯನ್ಸ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಹಿರಿಯ ವೈದ್ಯ ಡಾ.ಶ್ರೀಧರ ಕುರಡಗಿ, ಕಾರ್ಯದರ್ಶಿಯಾಗಿ ಡಾ.ನವೀನ ಹಿರೇಗೌಡರ, ಖಜಾಂಚಿ ಪ್ರವೀಣ ವಾರಕರ ಹಾಗೂ ಗದಗ-ಬೆಟಗೇರಿ ಲಯನ್ಸ್ ಲೇಡಿಸ್‌ ವಿಂಗ್‌ ಅಧ್ಯಕ್ಷರಾಗಿ ಡಾ.ಸುನೀತಾ ಕುರಡಗಿ, ಕಾರ್ಯದರ್ಶಿಯಾಗಿ ಡಾ.ಅರ್ಪಿತಾ ಹಿರೇಗೌಡರ, ಖಜಾಂಚಿಯಾಗಿ ಅಮೃತಾ ವಾರಕಾರ ಅಧಿಕಾರ ವಹಿಸಿಕೊಂಡರು.

ಉಪಾಧ್ಯಕ್ಷರಾಗಿ ರಾಜು ವೇರ್ಣೇಕರ, ರಮೇಶ ಶಿಗ್ಲಿ, ಐಪಿಪಿ ಅಶ್ವತ್ಥ್‌ ಸುಲಾಖೆ, ಸಹಕಾರ್ಯದರ್ಶಿಯಾಗಿ ವಿನೋದ ಉತ್ತರಕರ, ಸಹ ಖಜಾಂಚಿಯಾಗಿ ವಿಜಯ ಹುಬ್ಬಳಿಮಠ ಹಾಗೂ ಇತರೆ ಉಪ ಸಮಿತಿಗೆ ಲಿಂಗರಾಜ ತೋಟದ, ಮಂಜುನಾಥ ರಡ್ಡಿ, ರವಿ ಶಿವಪ್ಪಗೌಡರ, ಗಣಪತಸಾ ಮೇರವಾಡೆ, ಎಸ್.ಕೆ.ಶೆಟ್ಟರ, ಅರವಿಂದ ಪಟೇಲ, ಶಿವಪ್ರಭು ನೀಲಗುಂದ ಅಧಿಕಾರ ವಹಿಸಿಕೊಂಡರು.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.