ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಪ್ರಭಾ ಪ್ರವಾಹ ಭೀತಿ: ಲಕಮಾಪುರ ಜನರು ಕಾಳಜಿ ಕೇಂದ್ರಕ್ಕೆ

ಬೆಣ್ಣೆ ಹಳ್ಳ ಪ್ರವಾಹ: ಸಂಚಾರ ಸ್ಥಗಿತ
Last Updated 24 ಜುಲೈ 2021, 10:41 IST
ಅಕ್ಷರ ಗಾತ್ರ

ಗದಗ: ಮಲಪ್ರಭಾ ನದಿಯ ನವಿಲುತೀರ್ಥ ಜಲಾಶಯದಿಂದ ಶನಿವಾರ 15 ಸಾವಿರ ಕ್ಯುಸೆಕ್‌ ನೀರನ್ನು ಹೊಳೆ, ಕಾಲುವೆಗಳಿಗೆ ಹರಿಸಲಾಗಿದೆ. ಇದರಿಂದ ತಾಲ್ಲೂಕಿನ ಗಡಿ ಗ್ರಾಮವಾದ ಲಕಮಾಪುರದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ತಹಸೀಲ್ದಾರ್ ಎ.ಡಿ.ಅಮರಾವದಗಿ, ಡಿವೈಎಸ್‌ಪಿ ಶಂಕರ ರಾಗಿ, ಇಒ ಸಿ.ಆರ್.ಕುರ್ತಕೋಟಿ ಗ್ರಾಮಕ್ಕೆ ಭೇಟಿ ನೀಡಿ, ಜನರ ಮನವೊಲಿಸಿ ಅವರನ್ನು ಬೆಳ್ಳೇರಿಯ ಕೃಷಿ ಡಿಪ್ಲೊಮಾ ಕಾಲೇಜಿನಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದರು. ಗ್ರಾಮದ ಸಮೀಪ ಜಮೀನುಗಳಿಗೆ ನೀರು ನುಗ್ಗಿದ್ದು, ಅಂದಾಜು 200 ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ.

ನರಗುಂದ- ರೋಣ ರಸ್ತೆ ಮಧ್ಯೆ ಇರುವ ಯಾವಗಲ್ ಬಳಿಯ ಬೆಣ್ಣೆ ಹಳ್ಳ ಸೇತುವೆ ತುಂಬಿ ಹರಿಯುತ್ತಿದ್ದುಸಿಂಧನೂರ- ಹೆಮ್ಮಡಗಾ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು.

ತಾಲ್ಲೂಕಿನ ಸುರಕೋಡ, ಕುರ್ಲಗೇರಿ, ಗಂಗಾಪುರ, ರಡ್ಡೇರ ನಾಗನೂರ ಗ್ರಾಮದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT