ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣಜಿಗರು ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಇರುವವರು: ಶಾಸಕ ಪಾಟೀಲ

Published 25 ಜೂನ್ 2023, 13:05 IST
Last Updated 25 ಜೂನ್ 2023, 13:05 IST
ಅಕ್ಷರ ಗಾತ್ರ

ಗಜೇಂದ್ರಗಡ: ʼಬಣಜಿಗ ಸಮಾಜದವರು ಬಸವಣ್ಣನವರ ಅನುಯಾಯಿಗಳಾಗಿದ್ದು, ಅವರ ವಿಚಾರ, ಆಶಯಗಳನ್ನು ಜೀವನದಲ್ಲಿ ರೂಢಿಸಿಕೊಂಡಿದ್ದಾರೆ. ಎಲ್ಲರೊಂದಿಗೂ ಪ್ರೀತಿ, ವಿಶ್ವಾಸದಿಂದ ಜೀವನ ನಡೆಸುವವರಾಗಿದ್ದಾರೆʼ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಪಟ್ಟಣದ ಮೈಸೂರು ಮಠದಲ್ಲಿ ಭಾನುವಾರ ನಡೆದ ಗಜೇಂದ್ರಗಡ-ಉಣಚಗೇರಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ 11ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ʼಸಮಾಜದ ಬಗ್ಗೆ ಇರುವ ಕಳಕಳಿ, ಸಮಾಜದ ಮಕ್ಕಳಿಗೆ ಶೈಕ್ಷಣಿಕ ಗುಣಮಟ್ಟ ವೃದ್ಧಿಸುವ ನಿಟ್ಟಿನಲ್ಲಿ ವಾರ್ಷಿಕೋತ್ಸವ ಆಚರಿಸಲಾಗುತ್ತದೆ. ಹಿಂದಿನಿಂದಲೂ ಈ ಸಂಪ್ರದಾಯ ಗಜೇಂದ್ರಗಡದಲ್ಲಿ ನಡೆದುಕೊಂಡು ಬಂದಿದೆ. ಸಮಾಜದ ಕೆಲಸಗಳಿಗೆ ಕೈಲಾದಷ್ಟು ಸೇವೆ ಮಾಡಲು ಸಿದ್ಧನಿದ್ದೇನೆ. ಎಲ್ಲರ ಪ್ರೀತಿ ವಿಶ್ವಾಸ ಇರಲಿʼ ಎಂದು ಕೋರಿದರು.

ಡಾ.ಬಿ.ವಿ.ಕಂಬಳ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿ, ʼಬಣಜಿಗ ಸಮಾಜದವರು ವಿಶ್ವವ್ಯಾಪಿಯಾಗಿದ್ದಾರೆ. ಅವರು ಕೃಷಿ, ರಾಜಕೀಯ, ವ್ಯಾಪಾರ ವೃತ್ತಿಗಳ ಮೂಲಕ ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಎಂಬಂತೆ ಎಲ್ಲರೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ. ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಮೋಘ ಸಾಧನೆ ಮಾಡಿದ ಸಾಧಕರು, ಮಹಾನ್‌ ವ್ಯಕ್ತಿಗಳಿದ್ದಾರೆ ಎಂಬುದು ನಮಗೆ ಹೆಮ್ಮೆಯ ವಿಚಾರವಾಗಿದೆʼ ಎಂದರು.

ಸೂಳಿಭಾವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಾ.ಶಿವಗಂಗಾ ರಂಜಣಗಿ ಉಪನ್ಯಾಸ ನೀಡಿದರು. ಕುದರಿಮೋತಿ-ಗಜೇಂದ್ರಗಡ ಮೈಸೂರು ಸಂಸ್ಥಾನ ಮಠದ ವಿಜಯ ಮಹಾಂತ ಶ್ರೀ ಸಾನಿಧ್ಯ ವಹಿಸಿದ್ದರು.

ಣಜಿಗ ಸಮಾಜಕ್ಕೆ ಜಾಗ ನೀಡಬೇಕು ಎಂದು ಒತ್ತಾಯಿಸಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ, ಎಂಬಿಬಿಎಸ್‌ ನಲ್ಲಿ ಉತ್ತಮ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ ವಾರ್ಷೀಕೋತ್ಸವದ ಅಂಗವಾಗಿ ಇತ್ತಿಚೇಗೆ ಮಹಿಳಾ ಘಟಕದ ವತಿಯಿಂದ ಏರ್ಪಡಿಸಿದ್ದ ರಂಗೋಲಿ ಹಾಗೂ ವಚನ ವಾಚನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಶಾಸಕ ಜಿ.ಎಸ್.ಪಾಟೀಲ ಅವರನ್ನು ಬಣಜಿಗ ಸಮಾಜ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ದಲಿತ ಸಾಹಿತ್ಯ ಪರಿಷತ್‌ ವತಿಯಿಂದ ಸನ್ಮಾನಿಸಲಾಯಿತು.

ಗದಗ ಜೆ.ಟಿ.ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಮಹಾರುದ್ರಪ್ಪ ನರಗುಂದ, ಗಜೇಂದ್ರಗಡ-ಉಣಚಗೇರಿ ಬಣಜಿಗ ಸಮಾಜದ ಅಧ್ಯಕ್ಷ ಎಸ್.ಎಸ್.ವಾಲಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಮುಖಂಡರಾದ ವೀರಣ್ಣ ಶೆಟ್ಟರ್, ಎಸ್.ಎ. ಚಟ್ಟೇರ, ಡಿ.ಐ.ಅಂಗಡಿ, ಸುವರ್ಣಾ ನಂದಿಹಾಳ, ಕೀರ್ತಿ ಕೋಟಗಿ, ಅವಿನಾಶ ಕೋಟಗಿ, ಅಂದಪ್ಪ ಸಂಕನೂರ, ಎಂ.ಐ.ಅರಳಿ, ವಿ.ಬಿ.ನಿಡಶೇಷಿ, ಎಸ್.ಎಂ.ಪಟ್ಟೇದ, ಬಸವರಾಜ ಶೀಲವಂತರ, ಯು.ಎಸ್.ಮೆಣಸಗಿ, ಬಿ.ವಿ.ರಂಜಣಗಿ, ವಿ.ಎಸ್.ಪಟ್ಟೇದ, ಎಂ.ಎಸ್.ಮಳಗಿ, ಪಿ.ಎಸ್.ಜಾಲಿಹಾಳ, ಬಿ.ಎಂ.ಚೋಳಿನ, ಎ.ಎಂ.ಯಲಬುಣಚಿ, ಎನ್.ಎಸ್.ಹೊಸಂಗಡಿ, ಎಂ.ಬಿ.ಕೊಟಗಿ, ಎಂ.ವಿ.ಇಂಡಿ, ಎನ್.ಎ.ಹೊನವಾಡ, ವಿ.ಎಸ್.ನಂದಿಹಾಳ, ಎಂ.ಎಂ.ಮಲ್ಲಾಡದ, ಎಂ.ಐ.ಅಂಗಡಿ, ವಿ.ವಿ.ಕೋಟಿ, ಎಸ್.ಬಿ.ಮೆಣಸಿನಕಾಯಿ, ಎಸ್.ಎಸ್.ಸಂಕನೂರ, ವಿ.ಎಸ್.ಪಟ್ಟಣಶೆಟ್ಟಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT