ಮುಂಡರಗಿ: ‘ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಮಾಡುವ ಸಂದರ್ಭಗಳಲ್ಲಿ ಅಡೆತಡೆಗಳು ಬರುತ್ತವೆ. ಅವೆಲ್ಲವನ್ನು ಮೆಟ್ಟಿ ನಿಂತು ಪ್ರಾಮಾಣಿಕತೆಯಿಂದ ಸೇವೆ ಮಾಡಿದರೆ ನಾವು ನಿರೀಕ್ಷಿಸಿದ ಫಲ ಖಂಡಿತಾ ದೊರೆಯುತ್ತದೆ’ ಎಂದು ಡಿ.ವೈ.ಎಸ್.ಪಿ. ವೆಂಕಟಪ್ಪ ನಾಯಕ ತಿಳಿಸಿದರು.

ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಶತಮಾನೋತ್ಸವದ ಸಮಾರೋಪ, ಸಿಬ್ಬಂದಿ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸ್ವಸ್ಥ ಹಾಗೂ ಸದೃಢ ಸಮಾಜ ನಿರ್ಮಾಣದಲ್ಲಿ ನಮ್ಮ ಮಠ, ಮಾನ್ಯಗಳು ಮಹತ್ವದ ಪಾತ್ರ ವಹಿಸುತ್ತವೆ. ಎಲ್ಲ ವರ್ಗದ ಮಕ್ಕಳಿಗೆ ಉಚಿತ ಅನ್ನ, ಆಶ್ರಯ ಹಾಗೂ ಜ್ಞಾನ ನೀಡುವ ಮೂಲಕ ನಮ್ಮ ಮಠಗಳು ಬಹುದೊಡ್ಡ ಕ್ರಾಂತಿ ಮಾಡಿದವು’ ಎಂದು ಹರ್ಷ ವ್ಯಕ್ತಪಡಿಸಿದರು.

ನಿವೃತ್ತ ಪ್ರಾಚಾರ್ಯ ಡಿ.ಸಿ.ಮಠದ ಮಾತನಾಡಿ, ‘ಹಿಂದುಳಿದ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಈ ಭಾಗದ ಮಕ್ಕಳ ಬದುಕಿಗೆ ಅನ್ನದಾನೀಶ್ವರ ಮಠವು ಬೆಳಕು ನೀಡಿದೆ. ವಿದ್ಯಾ ಸಮಿತಿಯು ಶತಮಾನೋತ್ಸವ ಆಚರಿಸುವ ಮೂಲಕ ಎಲ್ಲರಲ್ಲಿ ಹರ್ಷ ಮೂಡಿಸಿದೆ’ ಎಂದು ತಿಳಿಸಿದರು.

ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ‘ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಾವು ಕಲಿತ ಶಾಲೆ ಹಾಗೂ ನಮಗೆ ಕಲಿಸಿದ ಗುರುಗಳನ್ನು ಮರೆಯಬಾರದು. ಸದಾ ನಮ್ಮ ಕೈಲಾದಷ್ಟು ಸಮಾಜ ಸೇವೆ ಮಾಡಬೇಕು’ ಎಂದು ಸಲಹೆ ನೀಡಿದರು.

ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಆರ್.ಎಚ್.ಜಂಣವಾರಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತಾಧಕಾರಿ ಬಿ.ಜಿ.ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪುಶ್ರೀ ಕಣವಿ ವಂದಿಸಿದರು.

ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು. ಬಳೂಟಗಿಯ ಶಿವಕುಮಾರ ದೇವರು, ವಿದ್ಯಾ ಸಮಿತಿಯ ಕಾರ್ಯದರ್ಶಿ ಆರ್.ಆರ್.ಹೆಗ್ಡಾಳ, ಕೆ.ವಿ.ಹಂಚಿನಾಳ, ಯು.ಸಿ.ಹಂಪಿಮಠ, ಸಿ.ಎಸ್.ಅರಸನಾಳ, ವೀರನಗೌಡ ಗುಡದಪ್ಪನವರ, ಅನ್ನದಾನಿ ಮೇಟಿ, ಎಸ್.ಬಿ.ಹಿರೇಮಠ, ಡಿ.ಸಿ.ಮಠದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.