ನರೇಗಲ್: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಶೃದ್ಧಾ -ಭಕ್ತಿಯಿಂದ ನಾಗರ ಪಂಚಮಿ ಹಬ್ಬವನ್ನು ಗುರುವಾರ ಆಚರಿಸಲಾಯಿತು. ಮಹಿಳೆಯರು, ಮಕ್ಕಳು ಹೊಸ ಬಟ್ಟೆ ಧರಿಸಿ ವಿವಿಧೆಡೆಯ ಕಲ್ಲಿನ ನಾಗ ದೇವರ ಮಂದಿರ, ಹುತ್ತಗಳಿಗೆ ತೆರಳಿ ಹಾಲೆರೆದು ಭಕ್ತಿ ಮೆರೆದರು. ಹುತ್ತಕ್ಕೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು.
ಸುತ್ತಮುತ್ತಲಿನ ಗ್ರಾಮಗಳಾದ ಮಾರನಬಸರಿ, ಜಕ್ಕಲಿ, ಅಬ್ಬಿಗೇರಿ, ನಿಡಗುಂದಿ, ಹಾಲಕೆರೆ, ಕೊಚಲಾಪುರ, ತೋಟಗಂಟಿ, ಮಲ್ಲಾಪುರ, ಡ.ಸ.ಹಡಗಲಿ, ಯರೆಬೇಲೇರಿ, ಹೊಸಳ್ಳಿಯ ಮನೆಯಲ್ಲಿನ ದೇವರುಗಳಿಗೆ ಸೇರಿದಂತೆ ಹಲವೆಡೆಯ ಹುತ್ತ ಹಾಗೂ ನಾಗ ದೇವರ ಮಂದಿರದಲ್ಲಿ ಬೆಳಗ್ಗೆಯಿಂದಲೇ ಮಹಿಳೆಯರ ದಂಡು ಕಂಡುಬಂತು.
ಮಕ್ಕಳು, ಯುವತಿಯರು, ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲ ವಯೋಮಾನದವರು ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು.