ಶುಕ್ರವಾರ, ಜೂಲೈ 3, 2020
22 °C

ನರಗುಂದ ಮತ್ತೆಮತ್ತೆ ಭೂಕುಸಿತ: ಆತಂಕದಲ್ಲಿ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಗುಂದ: ಪಟ್ಟಣದಲ್ಲಿ ಕಳೆದ 8 ತಿಂಗಳುಗಳಿಂದ ಒಂದಿಲ್ಲೊಂದು ಪ್ರದೇಶದಲ್ಲಿ ಭೂಕುಸಿತವಾಗುತ್ತಿದೆ. ಬುಧವಾರ ರಾತ್ರಿ ಸಿದ್ದರಾಮೇಶ್ವರ ನಗರದ ರವಿ ಒಡ್ಡರ ಮನೆಯ ಅಡುಗೆ ಮನೆ ಭಾಗದಲ್ಲಿ 8 ಅಡಿಯಷ್ಟು ಭೂ ಕುಸಿತವಾಗಿದೆ.

ಆ ಸಂದರ್ಭದಲಿ ಅಡುಗೆಮನೆಯಲ್ಲಿ ಯಾರು ಇಲ್ಲದ ಪರಿಣಾ ಯಾವುದೇ ಅನಾಹತ ಸಂಭವಿಸಿಲ್ಲ. ಇದರಿಂದ ಈ ನಗರದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಭಾನುವಾರ ಹಾಗು ಸೋಮವಾರ ಭಾರಿ ಮಳೆ ಸುರಿದಿತ್ತು. ಇದರ ಪರಿಣಾಮ ಅಂಅತರ್ಜಲ ಹೆಚ್ಚಾಗಿಯೋ ಮತ್ತಾವುದೇ ಕಾರಣದಿಂದ ಈ ಕುಸಿತ ಉಂಟಾಗಿರುಬಹುದೆಂದು ಉಹಿಸಲಾಗುತ್ತಿದೆ. ಆದರೆ ಆಳದಲ್ಲಿ ನೀರು ಹರಿಯುತ್ತಿದೆ, ಇದರಿಂದ ಸುತ್ತಮುತ್ತಲಿನ ಜನತೆ ಭಯಗೊಂಡಿರುವುದು ಸಾಮಾನ್ಯವಾಗಿದೆ.

ವಿಷಯ ತಿಳಿದ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಕುಸಿತಗೊಂಡ ಮನೆಗೆ ಭೇಟಿ ನೀಡಿ ನಂತರ ಪುರಸಭೆ ಸಿಬ್ಬಂದಿಯಿಂದ ಆ ಕುಸಿ ಪ್ರದೇಶವನ್ನು ಸಂಪೂರ್ಣ ಮುಚ್ಚಿಸಿದ್ದಾರೆ. ಈ ರೀತಿ ಅನೇಕ ಕಡೆ ಕುಸಿತವಾಗುತ್ತಿದೆ, ಇದರ ಬಗ್ಗೆ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಎಲ್ಲ ವಿವರ ಸಂಗ್ರಹಿಸಿದ್ದಾರೆ. ಇನ್ನು ಸ್ಪಷ್ಟ ವರದಿ ಬರಬೇಕಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.