ನರಗುಂದ: ಪಟ್ಟಣದಲ್ಲಿ ಸಂವಿಧಾನಶಿಲ್ಪಿ, ಡಾ.ಬಿ.ಆರ್.ಅಂಬೇಡ್ಕರ ರವರ ಮತ್ತು ಮೊದಲ ಉಪಪ್ರಧಾನಿ ಡಾ. ಬಾಬು ಜಗಜೀವನರಾಮರ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಆಗ್ರಹಿಸಿ ಪುರಸಭೆ ಸಮೀಪ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸರ್ವ ಜನಾಂಗದ ಸಂಘ ಸಂಸ್ಥೆಗಳ ಹೋರಾಟ ಸಮಿತಿ ಸದಸ್ಯರು ಸೋಮವಾರ ಧರಣಿ ಆರಂಭಿಸಿದರು.

ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರೆಯುತ್ತದೆ ಎಂದು ಪ್ರತಿಭಟನೆ ನೇತೃತ್ವ ವಹಿಸಿರುವ ಮುತ್ತು ಸುರಕೋಡ ಹಾಗೂ ರವಿ ಚಿಂತಾಲ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಧರಣಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು
ಬಿ.ಆರ್.ಅಂಬೇಡ್ಕರ ಅವರ ಮೂರ್ತಿ ನರಗುಂದದಲ್ಲಿ ಪ್ರತಿಷ್ಠಾಪನೆ ಆಗದಿರುವುದು ತೀವ್ರ ನೋವಿನ ಸಂಗತಿ, ಅದೇ ರೀತಿ. ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಮರ ಮೂರ್ತಿ ಪ್ರತಿಷ್ಠಾಪನೆಯಾಗಿಲ್ಲ. ಇದರ ಕುರಿತು ನಿರಂತರ ಮನವಿ ಕೊಡಲಾಗಿದೆ. ಕಳೆದ ವಾರವೂ ಮನವಿ ನೀಡಲಾಗಿದೆ. ಆದ್ದರಿಂದ ಇದಕ್ಕೆ ಲಿಖಿತ ಭರವಸೆ ನೀಡಬೇಕು. ಅಲ್ಲಿಯವರೆಗೂ ಧರಣಿ ನಿಲ್ಲುವುದಿಲ್ಲವೆಂದು ಹೇಳಿದರು.

ಈಗಾಗಲೇ ಸಿಪಿಐ ಮಂಜುನಾಥ ನಡುವಿನಮನಿ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಬಡಿಗೇರ ಭೇಟಿ ನೀಡಿದ್ದಾರೆ. ಆದರೆ ಅವರಿಂದ ನಮಗೆ ಯಾವುದೇ ಪರಿಹಾರ ದೊರೆತಿಲ್ಲ. ತಹಶೀಲ್ದಾರ್ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಲಿಖಿತ ಹೇಳಿಕೆ ನೀಡುವವರೆಗೂ ಧರಣಿ ನಿರಂತರ ಎಂದರು.

ಮುತ್ತು ಸುರಕೋಡ ಮಾತನಾಡಿದರು. ಎಫ್.ವೈ.ದೊಡಮನಿ, ಚನ್ನು ನಂದಿ, ನಬೀಸಾಬ ಕಿಲ್ಲೆದಾರ, ವೆಂಕಟೇಶ ಖಾನಪೇಠ, ಶೇಖಪ್ಪ ಬೆನ್ನೂರ, ಬಸವರಾಜ ಬಾರಿಗಿಡದ,ಯಶವಂತ ನಡುವಿನಮನಿ, ಕಿರಣ ಜೋಗಣ್ಣವರ, ಮಂಜುನಾಥ್ ಕಟ್ಟಿಮನಿ, ಗುರುನಾಥ ಕೆಂಗರಕರ,ದತ್ತಾತ್ರೇಯ ಜೋಗಣ್ಣವರ,ಈರಪ್ಪ ಮ್ಯಾಗೇರಿ,ಮಕ್ತುಮಸಾಬ ಪರಾಶ,ಶರಣಪ್ಪ ಗುಡಸಲಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.