
ಪುರಸಭೆ ಕಟ್ಟಡ ಭಾಸ್ಕರರಾವ್ ಭಾವೆಯವರ ಅರಮನೆಯಲ್ಲಿ 1871ರಿಂದ 2025 ಅಕ್ಟೋಬರ್ ಕೊನೆಯವರೆಗೂ ಕಾರ್ಯನಿರ್ವಹಿಸಿದೆ. ಪುರಸಭೆಗೆ ಸ್ವಂತ ಕಟ್ಟಡ ನಿರ್ಮಾಣವಾಗಿದ್ದರಿಂದ ಒಂದು ತಿಂಗಳ ಹಿಂದೆ ಅಲ್ಲಿಗೆ ಸ್ಥಳಾಂತರಗೊಂಡಿದೆ. ಆದರೆ ಅರಮನೆಯಲ್ಲಿ ಐತಿಹಾಸಿಕ ಅವಶೇಷಗಳಾದ ಖಡ್ಗ ವರ್ಣಚಿತ್ರಗಳು ವಿನ್ಯಾಸ ಹಾಗೆಯೇ ಇವೆ. ಆದ್ದರಿಂದ ಅದನ್ನು ಐತಿಹಾಸಿಕ ಕುರುಹಾಗಿ ಉಳಿಸುವ ಪ್ರಯತ್ನವನ್ನು ಪುರಸಭೆ ಮುಂದುವರಿಸಿದೆ. ಈ ನಿಟ್ಟಿನಲ್ಲಿ ಪುರಸಭೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಮೇಲೆ ಪುರಸಭೆ ಸದಸ್ಯರ ಪ್ರಥಮ ಸಭೆಯಲ್ಲಿ ಅರಮನೆಯನ್ನು ಪ್ರಾಚ್ಯವಸ್ತು ಇಲಾಖೆಗೆ ವಹಿಸುವ ಸಲುವಾಗಿ ಠರಾವು ಪಾಸ್ ಮಾಡಲಾಯಿತು. ಅರಮನೆ ಹಿಂದಿನ ಕಟ್ಟಡ ಉಳಿದ ಜಾಗೆ ಸೇರಿದಂತೆ 15 ಗುಂಟೆ ಇದೆ. ಆದ್ದರಿಂದ ಅದನ್ನು ಈಗಾಗಲೇ ಪ್ರಾಚ್ಯ ವಸ್ತು ಇಲಾಖೆಗೆ ಅಗತ್ಯ ಮಾಹಿತಿ ಜೊತೆಗೆ ಮನವಿ ಸಲ್ಲಿಸಲಾಗಿದೆ. ಬೇಗನೆ ಐತಿಹಾಸಿಕ ಮ್ಯೂಸಿಯಂ ಆಗಿ ಆರಂಭಗೊಳ್ಳುವ ಭರವಸೆ ಹೊಂದಲಾಗಿದೆ.ಸಂಗಮೇಶ ಬ್ಯಾಳಿ ಮುಖ್ಯಾಧಿಕಾರಿ ನರಗುಂದ
ಬಾಬಾಸಾಹೇಬ ಭಾವೆಯವರ ಅರಮನೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ಕುರುಹು. ಅದನ್ನು ಆದಷ್ಟು ಬೇಗ ಪ್ರಾಚ್ಯವಸ್ತು ಇಲಾಖೆ ತನ್ನ ಸುಪರ್ದಿಗೆ ಪಡೆದು ಮ್ಯೂಸಿಯಂ ಮಾಡಬೇಕು. ಇಲ್ಲವಾದರೆ ಪಾಳು ಬೀಳುವುದು ನಿಶ್ಚಿತ. ಅದಕ್ಕೆ ಅವಕಾಶ ಕೊಡದೇ ಜನಪ್ರತಿನಿಧಿಗಳು ಗಮನಹರಿಸಬೇಕು.–ಚನ್ನು ನಂದಿ, ಸಂಚಾಲಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ನರಗುಂದ
ನರಗುಂದ ಬಂಡಾಯದ ನಾಡು. ಇದಕ್ಕೆ ಕಾರಣರಾದ ನರಗುಂದ ಬಾಬಾಸಾಹೇಬರ ಅವಶೇಷಗಳಿಗೆ ನಿರ್ಲಕ್ಷ್ಯ ಸಲ್ಲದು. ಕೂಡಲೇ ಅವರ ಐತಿಹಾಸಿಕ ಅವಶೇಷಗಳನ್ನು ಪ್ರಾಚ್ಯವಸ್ತು ಇಲಾಖೆ ಕಾಯಕಲ್ಪ ನೀಡಿ ರಕ್ಷಿಸಬೇಕು–ಡಿ.ಬಿ.ಪಾಟೀಲ ಚಿತ್ರಕಲಾ ಶಿಕ್ಷಕ ನರಗುಂದ ವಸ್ತುಸಂಗ್ರಹಾಲಯವಾಗಲಿ ನರಗುಂದ ಬಂಡಾಯದ ಇತಿಹಾಸ ರೋಮಾಂಚನಕಾರಿಯಾಗಿದೆ. ಅದರ ರೂವಾರಿ ಭಾಸ್ಕರರಾವ್ ಭಾವೆ. ಅವರ ಅರಮನೆ ಅವಶೇಷಗಳು ಮುಂದಿನ ಪೀಳಿಗೆ ನೋಡುವಂತಾಗಲು ಅರಮನೆ ವಸ್ತು ಸಂಗ್ರಹಾಲಯವಾಗಬೇಕು.–ರಮೇಶ ಐನಾಪುರ ಕನ್ನಡ ಪ್ರಾಧ್ಯಾಪಕ ಭೈರನಹಟ್ಟಿ
ಬಂಡಾಯವೆಂದರೆ ನರಗುಂದ ನರಗುಂದವೆಂದರೆ ಬಂಡಾಯ. ಆದ್ದರಿಂದ ಸರ್ಕಾರ ಬಂಡಾಯಕ್ಕೆ ಕಾರಣರಾದ ಬಾಬಾಸಾಹೇಬರ ಅರಮನೆಯನ್ನು ತುರ್ತಾಗಿ ಐತಿಹಾಸಿಕ ಪ್ರವಾಸಿ ಸ್ಥಳವಾಗಿಸಬೇಕು.–ಯಶೋದಾ ಬಡಿಗೇರ ವಿದ್ಯಾರ್ಥಿನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.