ನರಗುಂದ: ಪಟ್ಟಣದ ಪುರಸಭೆ ನೂತನ ಅಧ್ಯಕ್ಷೆಯಾಗಿ 15ನೇ ವಾರ್ಡ್ನ ಸದಸ್ಯೆ ನೀಲವ್ವ ಪವಾಡೆಪ್ಪ ವಡ್ಡಿಗೇರಿ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಚುನಾವಣೆಗೆ ಒಬ್ಫರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಶ್ರೀಶೈಲ ತಳವಾರ ವಡ್ಡಿಗೇರಿಯವರು ಅಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು.

ಮಾರ್ಚ್ 19 ರಂದು ಅಧ್ಯಕ್ಷ ಸ್ಥಾನಕ್ಕೆ ಅನ್ನಪೂರ್ಣ ಯಲಿಗಾರ ಅವರು ರಾಜೀನಾಮೆ ನೀಡಿದ್ದು, ಅವರ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಶಾಸಕ ಸಿ ಸಿ ಪಾಟೀಲ ನೂತನ ಅಧ್ಯಕ್ಷರಿಗೆ ಶುಭ ಕೋರಿದರು. ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಶಾಸಕ ಸಿ.ಸಿ.ಪಾಟೀಲ ಮಾತನಾಡಿ, ‘ಬಾಕಿ ಉಳಿದಿರುವ ಅವಧಿಯಲ್ಲಿ ನೂತನ ಅಧ್ಯಕ್ಷರು ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ತರಕಾರಿ ಮಾರುಕಟ್ಟೆ ಹಾಗೂ ನೂತನ ಪುರಸಭೆ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸುವಲ್ಲಿ ಶ್ರಮವಹಿಸಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕಾರ್ಯನಿರ್ವಹಿಸಬೇಕು’ ಎಂದರು.

ಉಪಾಧ್ಯಕ್ಷೆ ಕಾಶವ್ವ ಮಳಗಿ, ಅನ್ನಪೂರ್ಣ ಯಲಿಗಾರ, ಭಾವನಾ ಪಾಟೀಲ, ರಾಜೇಶ್ವರಿ ಹವಾಲ್ದಾರ, ಪ್ರೇಮಾ ಅರ್ಬಾಣದ, ಪ್ರಶಾಂತ ಜೋಶಿ, ದೇವಣ್ಣ ಕಲಾಲ, ರೇಣುಕಾ ಕಲಾರಿ, ಪ್ರಕಾಶ ಹಾದಿಮನಿ, ಚಂದ್ರಗೌಡ ಪಾಟೀಲ, ಮಹೇಶ ಬೋಳಶೆಟ್ಟಿ, ರಾಚನಗೌಡ ಪಾಟೀಲ, ಮಂಜುಳಾ ಪಟ್ಟಣಶೆಟ್ಟಿ, ಹುಸೇನಸಾಬ ಗೋಟೂರ, ರಜಿಯಾಬೇಗಂ ತಹಶೀಲ್ದಾರ, ಸುನೀಲ ಕುಷ್ಟಗಿ, ಉಮೇಶಗೌಡ ಪಾಟೀಲ, ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.