ರೋಣ: ‘ನಾಡಿನ ರೈತರು ರಸಗೊಬ್ಬರಗಳಿಗಾಗಿ ಸರ್ಕಾರ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಮೇಲೆ ಅವಲಂಬಿತರಾಗುವ ಜೊತೆಗೆ ಸಾಲದ ಸುಳಿಗೆ ಸಿಲುಕಿ ಕೊಳ್ಳದೆ ಸಾವಯವ ಪದ್ಧತಿ ಅಳವಡಿಸಿಕೊಳ್ಳಿ’ ಎಂದು ಪ್ರಗತಿಪರ ರೈತ ಸುರೇಶಗೌಡ ಪಾಟೀಲ ಹೇಳಿದರು.

ತಾಲ್ಲೂಕಿನ ಬಸಲಾಪುರ ಗ್ರಾಮದ ಜಮೀನಿನಲ್ಲಿ ತಾಲ್ಲೂಕು ಪಂಚಾಯಿತಿ ರೋಣ, ಕೃಷಿ ಇಲಾಖೆ ಸಹಯೋಗದಲ್ಲಿ 2025-26ನೇ ಸಾಲಿನ ಆತ್ಮ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆ ಅಡಿ B–15 ಹಾಗೂ BGD– 111-1 ಕಡಲೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಕೃಷಿಯಲ್ಲಿ ಆದಾಯದ ಏರುಪೇರು ಅಪೌಷ್ಟಿಕತೆ ಜಗತ್ತಿನಾದ್ಯಂತ ಪಸರಿಸುತ್ತಿದ್ದು ಸದೃಢ ಆರೋಗ್ಯ ಹಾಗೂ ಸುಸ್ಥಿರ ಆರ್ಥಿಕತೆಗಾಗಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ. ಬಿತ್ತಿದ ದಿನದಿಂದಲೇ ಕೃಷಿ ಚಟುವಟಿಕೆ ಪ್ರಾರಂಭಿಸಿ ಪ್ರತಿ ಹಂತದಲ್ಲಿಯೂ ರೈತರು ಎಚ್ಚರಿಕೆ ತೆಗೆದುಕೊಳ್ಳಬೇಕು. ಕುಲಾಂತರಿ ತಳಿಗಳನ್ನು ಬೆಳೆಯದೆ ಜವಾರಿ ತಳಿಗಳ ಕಡೆ ರೈತರು ಮನಸ್ಸು ಮಾಡಬೇಕಿದೆ. ಸತ್ವಯುತ ಬೆಳೆಗಳಿಗಾಗಿ ಗೊಮೂತ್ರ ಬಳಸಬಹುದು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆ ಗದಗ ಜಿಲ್ಲಾ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಕೃಷಿಕರು ಹಳೇ ಪದ್ಧತಿಯ ವ್ಯವಸಾಯ ಕೈ ಬಿಡದೆ ಮುಂದುವರೆಸಿ ರಾಸಾಯನಿಕ ಗೊಬ್ಬರ ಬಳಸಿ ಬೆಳೆ ಬೆಳೆಯುವುದು ಕ್ಯಾನ್ಸರ್ ಬೇಕಾದಂತೆ ಹಾಗೂ ಮಾರಾಟ ಮಾಡುವುದು ಕ್ಯಾನ್ಸರ್ ರೋಗ ಮಾಡಿದಂತೆ ಸಾವಯವ ಕೃಷಿ ಉತ್ತಮ ಆರೋಗ್ಯಕ್ಕೆ ಇಂದಿನ ಅಗತ್ಯವಾಗಿದ್ದು, ನಮ್ಮ ನಾಡಿನ ಪ್ರತಿ ಕೃಷಿಕರ ಹಬ್ಬದ ಹಿಂದೆಯೂ ಒಂದೊಂದು ವೈಜ್ಞಾನಿಕ ಕಾರಣವಿದೆ ಎಂದರು.

ಕಾರ್ಯಕ್ರಮದಲ್ಲಿ ರೋಣ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್.ತಹಶೀಲ್ದಾರ, ರೋಣ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪ ಅರಹುಣಸಿ, ಹನುಮಂತಪ್ಪ ಪಟ್ಟೇದ, ಅಡಿವೆಪ್ಪ ಗಡಗಿ, ಸಾವಿತ್ರಿ ಶಿವನಗೌಡ್ರ, ಶಿವಣ್ಣ ಅರಹುಣಸಿ, ಮೇಘರಾಜ ಬಾವಿ, ಬಸನಗೌಡ ಪ್ಯಾಟಿಗೌಡ್ರ, ಶಿವನಗೌಡ ಪಾಟೀಲ, ಸುವರ್ಣ ಪರಡ್ಡಿ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.