ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕಾಗಿ ಫೋನ್ ಇನ್ ಕಾರ್ಯಕ್ರಮ: ಡಿಡಿಪಿಐ

Published 8 ಫೆಬ್ರುವರಿ 2024, 13:18 IST
Last Updated 8 ಫೆಬ್ರುವರಿ 2024, 13:18 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳಲ್ಲಿ ಫೋನ್ ಇನ್ ಕಾರ್ಯಕ್ರಮ ಬಹಳಷ್ಟು ಮುಖ್ಯವಾದದ್ದು. ವಿದ್ಯಾರ್ಥಿಗಳು ವಿಷಯಗಳಲ್ಲಿ ಕಂಡುಕೊಳ್ಳುವ ಸಮಸ್ಯೆಗಳನ್ನು ಆಯಾ ವಿಷಯಗಳ ಅನುಭವಿ ಸಂಪನ್ಮೂಲ ಶಿಕ್ಷಕರಿಂದ ಪರಿಹರಿಸಿಕೊಂಡು ಮುಂದುವರೆಯಲು ಇದು ಬಹಳಷ್ಟು ಸಹಕಾರಿಯಾಗಿದೆ’ ಎಂದು ಡಿಡಿಪಿಐ ಎಂ.ಎ.ರಡ್ಡೇರ ಅಭಿಪ್ರಾಯಪಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ ವತಿಯಿಂದ ಇಲ್ಲಿನ ಪಿಎಸ್‍ಬಿಡಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೋನ್ ಇನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಬಿಇಒ ಜಿ.ಎಂ. ಮುಂದಿನಮನಿ ಮಾತನಾಡಿ, ‘2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಶಾಲಾ ಆರಂಭದಿಂದಲೇ ಕ್ರಿಯಾಯೋಜನೆ ಹಾಕಿಕೊಂಡು ಅನುಷ್ಠಾನಕ್ಕೆ ತರಲಾಗುತ್ತಿದೆ’ ಎಂದರು.

ಪ್ರೌಢ ವಿಭಾಗದ ಬಿಆರ್ಪಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಭಾಷಾ ಸಂಪನ್ಮೂಲ ಶಿಕ್ಷಕರಾದ ಜೆ.ಡಿ. ಲಮಾಣಿ, ವಾಸುದೇವ ಮಡ್ಲಿ, ಡಿ.ಡಿ. ಲಮಾಣಿ, ಅಶೋಕ ಛತ್ರದ ವಿದ್ಯಾರ್ಥಿಗಳಿಂದ ಪೋನ್ ಕರೆಗಳನ್ನು ಸ್ವೀಕರಿಸಿ ಅವರಿಗೆ ಮಾರ್ಗದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಬಿಆರ್‌ಪಿ ಬಿ.ಎಂ. ಯರಗುಪ್ಪಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಎಸ್.ಡಿ. ಲಮಾಣಿ, ರಾಜೇಶ ಉಮಚಗಿ, ಎಮ್.ಸಿ. ಹಿರೇಮಠ, ದತ್ತಾತ್ರೇಯ ವೈದ್ಯ, ಎಸ್.ಬಿ. ಅಣ್ಣಿಗೇರಿ, ಫ್ರಭುಗೌಡ ಯಕ್ಕಿಕೊಪ್ಪ, ಫಕೀರೇಶ ಚಕಾರದ, ಪ್ರದೀಪ ಶೆಟ್ಟರ್, ಸಿಆರ್‍ಪಿಗಳಾದ ಸತೀಶ್ ಬೋಮಲೆ, ಉಮೇಶ ನೇಕಾರ, ಎನ್.ಎ. ಮುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT