ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹15 ಸಾವಿರ ಗೌರವಧನಕ್ಕೆ ಆಗ್ರಹ

Published 8 ಜುಲೈ 2023, 13:09 IST
Last Updated 8 ಜುಲೈ 2023, 13:09 IST
ಅಕ್ಷರ ಗಾತ್ರ

ಧಾರವಾಡ: ಅಂಗನವಾಡಿ ನೌಕರರ ಗೌರವಧನವನ್ನು ₹ 15 ಸಾವಿರಕ್ಕೆ ಹೆಚ್ಚಳ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದವರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಪ್ರತಿಭಟನಾಕಾರರು, ಹಿಂದಿನ ಬಜೆಟ್‍ನಲ್ಲಿ ಘೋಷಿಸಿದ ಅಂಶಗಳನ್ನು ಜಾರಿಗೊಳಿಸಬೇಕು. ಗುಣಮಟ್ಟದ ಮೊಬೈಲ್ ಫೋನ್‌ ಒದಗಿಸಬೇಕು. ಇಂಟರ್‌ನೆಟ್ ಸೌಲಭ್ಯ ನೀಡಬೇಕು. ಹೆಚ್ಚುವರಿ ಕೆಲಸ ನೀಡಬಾರದು’ ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಸಂಚಾಲಕಿ ಭುವನಾ ಬಳ್ಳಾರಿ ಮಾನತಾಡಿ, ‘ಕಾಂಗ್ರೆಸ್‌ ಆಡಳಿತ ಚುಕ್ಕಾಣಿ ಹಿಡಿದರೆ ಅಂಗನವಾಡಿ ನೌಕರರ ಗೌರವಧನವನ್ನು ₹ 15 ಸಾವಿರಕ್ಕೆ ಹೆಚ್ಚಿಸುವುದಾಗಿ ಮತ್ತು ನಿವೃತ್ತಿ ಪರಿಹಾರ ₹ 2 ಲಕ್ಷ ನೀಡುವುದಾಗಿ ಚುನಾವಣೆ ಸಂದರ್ಭದಲ್ಲಿ ಘೋಷಿಸಿತ್ತು. ಈ ಭರವಸೆ ಕಾರ್ಯಗತಗೊಳಿಸಲು ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ಕಸ್ತೂರಿ ಅಗಸಿಮನಿ, ಸರೋಜಾ ಹುಲಸೇರ,ಕವಿತಾ ಮಸೂತಿ, ರತ್ನಾ ಗಾಣಿಗೇರ, ಶ್ರೀದೇವಿ ತೇಗೂರ, ಚನ್ನಮ್ಮ ತಡಕೋಡ, ಮಂಜುಳಾ ಕಂಬಳಿ, ಶ್ರೀದೇವಿ ಹೂಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT