ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT
ADVERTISEMENT

ರೋಣ | ಶೌಚಾಲಯ, ಮೂತ್ರಾಲಯ: ಸ್ವಚ್ಛತೆಯೇ ಮಾಯ

ಉಮೇಶ ಬಸನಗೌಡರ
Published : 1 ಸೆಪ್ಟೆಂಬರ್ 2025, 5:27 IST
Last Updated : 1 ಸೆಪ್ಟೆಂಬರ್ 2025, 5:27 IST
ಫಾಲೋ ಮಾಡಿ
Comments
ನ್ಯಾಯಾಲಯದ ಮುಂಭಾಗ ರಾಜಕಾಲುವೆಯ ಪಕ್ಕದಲ್ಲಿರುವ ಮೂತ್ರಾಲಯದ ನೋಟ
ನ್ಯಾಯಾಲಯದ ಮುಂಭಾಗ ರಾಜಕಾಲುವೆಯ ಪಕ್ಕದಲ್ಲಿರುವ ಮೂತ್ರಾಲಯದ ನೋಟ
ಶೌಚಾಲಯ ಮೂತ್ರಾಲಯಗಳ ಸೂಕ್ತ ನಿರ್ವಹಣೆ ಹೆಸರಿನಲ್ಲಿ ಸ್ಥಳೀಯ ಆಡಳಿತಗಳು ಸಾಕಷ್ಟು ಅನುದಾನ ಖರ್ಚು ಮಾಡುತ್ತವೆ. ಆದರೆ ನೈಜವಾಗಿ ಸ್ವಚ್ಛತೆ ಮರೀಚಿಕೆಯಾಗಿ ಉಳಿದಿದೆ
ರಮೇಶ ನಂದಿ ಬೆಳವಣಿಕಿ ಗ್ರಾಮದ ಯುವಕ
ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೂ ಸೂಕ್ತ ಕ್ರಮವಹಿಸಲಾಗುವುದು
ಚಂದ್ರಶೇಖರ ಕಂದಕೂರ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ರೋಣ
ಮಹಿಳಾ ಮೂತ್ರಾಲಯಗಳ ಸ್ಥಿತಿ ಶೋಚನೀಯ
ಪಟ್ಟಣ ಪ್ರದೇಶಗಳಲ್ಲಿ ಪುರುಷ ಮೂತ್ರಾಲಯಗಳ ಅಕ್ಕಪಕ್ಕದಲ್ಲಿಯೇ ಮಹಿಳೆಯರ ಮೂತ್ರಾಲಯವು ಇವೆ. ಪುರುಷರು ಶೌಚಾಲಯಗಳಲ್ಲಿನ ಅವಾಂತರದಿಂದ ಮೂತ್ರಾಲಯಗಳನ್ನು ಪ್ರವೇಶಿಸದೆ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆಗೆ ಮುಂದಾಗುತ್ತಿದ್ದಾರೆ. ಆದರೆ ಮಹಿಳೆಯರು ಮೂತ್ರಾಲಯಗಳ ಒಳಗೆಯೇ ಪ್ರವೇಶಿಸಿ ಮೂತ್ರ ವಿಸರ್ಜಿಸಬೇಕು. ಆದರೆ ಶೌಚಾಲಯಗಳಲ್ಲಿ ಮನುಷ್ಯರು ಇರಲಿ ಪ್ರಾಣಿಗಳು ಸಹ ಒಳಪ್ರವೇಶಿಸದಂತಹ ಕೆಟ್ಟ ಸ್ಥಿತಿಯಲ್ಲಿವೆ. ಆದರೂ ಮಹಿಳೆಯರು ವಿಧಿಯಿಲ್ಲದೆ ದುರ್ನಾತ ಬೀರುತ್ತಿರುವ ಸಾಂಕ್ರಾಮಿಕ ಕಾಯಿಲೆಗಳಿಗೆ ಮುಕ್ತ ಆಹ್ವಾನ ನೀಡುತ್ತಿರುವ ಸಾರ್ವಜನಿಕ ಮೂತ್ರಾಲಯಗಳನ್ನೇ ಪ್ರವೇಶಿಸಿ ಮೂತ್ರ ವಿಸರ್ಜನೆಗೆ ಮುಂದಾಗುತ್ತಿದ್ದಾರೆ. ಸ್ವಚ್ಛತೆ ಹಾಗೂ ಮೂತ್ರಾಲಯಗಳ ನಿರ್ವಹಣೆಗೆ ಲಕ್ಷಾಂತರ ಅನುದಾನವನ್ನು ಬಳಕೆ ಮಾಡುವುದಾಗಿ ಲೆಕ್ಕ ಇಡುವ ಸ್ಥಳೀಯ ಆಡಳಿತಗಳು ಅವುಗಳ ಸ್ವಚ್ಛತೆಗೆ ಕನಿಷ್ಠ ಕ್ರಮಗಳನ್ನು ಕೈಗೊಳ್ಳದಿರುವುದು ಬೇಸರದ ಸಂಗತಿ ಎಂದು ಮಹಿಳೆಯರು ಕಿಡಿಕಾರಿದ್ದಾರೆ.
ಸಾಂಕ್ರಾಮಿಕ ಕಾಯಿಲೆ ಭೀತಿ
ಪಟ್ಟಣ ಪ್ರದೇಶಗಳಲ್ಲಿನ ಶೌಚಾಲಯ ಹಾಗೂ ಮೂತ್ರಾಲಯಗಳಲ್ಲಿ ಸ್ಥಳೀಯ ಆಡಳಿತಗಳು ಸ್ವಚ್ಛತೆಗೆ ಆದ್ಯತೆ ನೀಡದಿರುವುದರಿಂದ ಈ ಶೌಚಾಲಯಗಳ ಆಸುಪಾಸು ಕನಿಷ್ಠ 50 ಮೀಟರ್ ದೂರದವರೆಗೂ ದುರ್ನಾತ ಬೀರುತ್ತಿದೆ. ಶೌಚಾಲಯ ಮೂತ್ರಾಲಯಗಳನ್ನು ಪ್ರವೇಶಿಸುವವರು ಮಾತ್ರವಲ್ಲದೇ ರಸ್ತೆ ಮೇಲೆ ಸಂಚರಿಸುವವರೂ ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಈ ಶೌಚಾಲಯ ಮೂತ್ರಾಲಯಗಳ ಸುತ್ತ ಮುತ್ತ ಸಾಂಕ್ರಾಮಿಕ ರೋಗಗಳನ್ನು ಸೃಷ್ಟಿಸಬಹುದಾದ ಸೊಳ್ಳೆಗಳ ಆರ್ಭಟ ಜೋರಾಗಿರುತ್ತದೆ. ಹೀಗಾಗಿ ಈ ಶೌಚಾಲಯ ಮೂತ್ರಾಲಯಗಳು ಸಾಂಕ್ರಾಮಿಕ ಕಾಯಿಲೆಗಳಿಗೆ ಮುಕ್ತ ಅವಕಾಶಗಳನ್ನು ನೀಡುವಂತಿವೆ. ಇಷ್ಟೆಲ್ಲಾ ಕೆಟ್ಟ ಪರಿಸ್ಥಿತಿ ಇದ್ದರೂ ಸ್ಥಳೀಯ ಆಡಳಿತ ಸ್ವಚ್ಛತೆಗೆ ಆದ್ಯತೆ ನೀಡದಿರುವುದು ಒಂದೆಡೆಯಾದರೆ ಸೊಳ್ಳೆ ಹಾಗೂ ದುರ್ನಾತ ನಿಯಂತ್ರಣಕ್ಕೆ ಅಗತ್ಯವಿರುವ ಬ್ಲೀಚಿಂಗ್ ಪೌಡರ್ ಇತ್ಯಾದಿಯನ್ನು ಸಿಂಪಡಿಸಲು ಮುಂದಾಗುತ್ತಿಲ್ಲ. ಅದರಲ್ಲೂ ಮಳೆಗಾಲದ ದಿನಗಳಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸುತ್ತಿವೆ. ನಾಗರಿಕ ಸಮೂಹದ ಆರೋಗ್ಯದ ದೃಷ್ಟಿಯಿಂದ ಸ್ಥಳೀಯ ಆಡಳಿತಗಳು ಶೌಚಾಲಯ ಮೂತ್ರಾಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT