ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರಗುಂದ | ಮಳೆ: ರೈತರಲ್ಲಿ ಸಂತಸ

Published 12 ಜೂನ್ 2024, 16:15 IST
Last Updated 12 ಜೂನ್ 2024, 16:15 IST
ಅಕ್ಷರ ಗಾತ್ರ

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರ ಮಧ್ಯಾಹ್ನ ಕೆಲಹೊತ್ತು ಜೋರಾಗಿ ಹಾಗೂ ತುಂತುರು ಮಳೆ ಸುರಿಯುವ ಮೂಲಕ ರೈತರನ್ನು ಮತ್ತೆ ಸಂತಸಗೊಳಿಸಿತು. ಕೃಷಿ ಚಟುವಟಿಕೆಗೆ ಅನುವು ಮಾಡಿಕೊಟ್ಟಿತು.

ಮಧ್ಯಾಹ್ನ 3 ಗಂಟೆ ಸುಮಾರಿಗೆ ತುಸು ಜೋರಾಗಿ ಮಳೆ ಸುರಿದು, ಸಂಜೆಯ ವರೆಗೂ ತುಂತುರಾಗಿ ಮುಂದವರಿಯಿತು.

ರಸ್ತೆ ಕೆಸರುಮಯ: ನಿರಂತರ ತುಂತುರು ಮಳೆಗೆ ಕೆಲವು ಓಣಿಗಳ, ನಗರಗಳ ರಸ್ತೆಗಳು ಕೆಸರುಮಯವಾಗಿ ಸಂಚರಿಸಲು ತೊಂದರೆ ಪಡಬೇಕಾಯಿತು.

ಸಂತೆದಿನ ಅಸ್ತವ್ಯಸ್ತ: ಬುಧವಾರ ಸಂತೆ ದಿನವಾಗಿದ್ದರಿಂದ ತರಕಾರಿ ಖರೀದಿಸಲು ಸಾರ್ವಜನಿಕರು ಮಳೆಯ ನಡುವೆ ಹರಸಾಹಸ ಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT