ಉಡುಪಿ: ತೆಂಗು ಬೆಳೆಗಾರರಿಗೆ ಅನು ಕೂಲ ಮಾಡಿಕೊಡಲು ರಾಜ್ಯ ಸರ್ಕಾರ ನೀರಾ ನೀತಿ ಜಾರಿ ತಂದಿದೆ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಜಿಲ್ಲಾ ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಕೃಷಿ ಕೀಟ ನಿವಾರಣಾ ಸಂಪನ್ಮೂಲ ಕೇಂದ್ರ (ಎನ್ಬಿಎಐಆರ್) ಬೆಂಗಳೂರು, ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ ಕಾಸರಗೋಡು, ಬ್ರಹ್ಮಾವರ ವಲಯ ಕೃಷಿ ವಿಜ್ಞಾನ ಕೇಂದ್ರ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ತೆಂಗು ಬೆಳೆಗೆ ತಗುಲುವ ಕೀಟ, ರೋಗ ನಿಯಂತ್ರಣ’ ರೈತ– ವಿಜ್ಞಾನಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತೆಂಗಿನ ಬೆಲೆ ನಿರೀಕ್ಷೆಯ ಮಟ್ಟಕ್ಕೆ ಏರಿಕೆಯಾಗದ ಕಾರಣ ಬೆಳೆಗಾರರ ಆದಾಯ ಏರಿಕೆಯಾಗುತ್ತಿಲ್ಲ. 1990 ರಲ್ಲಿ ಒಂದು ತೆಂಗಿನ ಕಾಯಿ ಬೆಲೆ ₹ 7 ಇತ್ತು. ಆದರೆ, ಪ್ರಸ್ತುತ ಅದು ₹ 20ರ ಆಸುಪಾಸು ಇದೆ. ತೋಟ ನಿರ್ವಹಣೆಯ ವೆಚ್ಚ, ಗೊಬ್ಬರದ ದರ, ಕೀಟನಾಶಕದ ಬೆಲೆ ಮಾತ್ರ ಹೆಚ್ಚಳವಾಗಿದೆ. ಆದ್ದ ರಿಂದ ಬೆಳೆಗಾರರಿಗೆ ಪ್ರೋತ್ಸಾಹ ನೀಡಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ. ನೀರಾ ಇಳಿಸಲು ಅನು ಮತಿ ನೀಡಲಾಗಿದೆ. ತೆಂಗು ಉತ್ಪನ್ನ ಕೇಂದ್ರಗಳಿಗೆ ಗರಿಷ್ಠ ₹ 50 ಲಕ್ಷ ಸಹಾ ಯಧನ ನೀಡಲಾಗುತ್ತಿದೆ ಎಂದರು.

‘ಧಾರ್ಮಿಕ ನಂಬಿಕೆ ಹಿನ್ನೆಲೆಯಲ್ಲಿ ಆರ್ಥಿಕ ಲೆಕ್ಕಾಚಾರ ಇರುವುದನ್ನು ನಾವು ಕಾಣಬಹುದು. ಹೋಮ– ಹವನಗಳಲ್ಲಿ ತೆಂಗಿನ ಕಾಯಿ ಬಳಸಲಾ ಗುತ್ತದೆ. ಇದನ್ನು ಕೆಲವರು ವ್ಯರ್ಥ ಎಂದು ವಿಶ್ಲೇಷಿಸುತ್ತಾರೆ. ಆದರೆ, ಅದು ತೆಂಗಿನ ಕಾಯಿಯ ಬೇಡಿಕೆಯನ್ನು ಹೆಚ್ಚಿ ಸುತ್ತದೆ. ದೇವಸ್ಥಾನಗಳಲ್ಲಿ ತೆಂಗಿನ ಕಾಯಿ ಬಳಸದಿದ್ದರೆ ಈಗಿರುವಷ್ಟು ಸಹ ಬೇಡಿಕೆ ಇರುತ್ತಿರಲಿಲ್ಲ. ಪೆರ್ಡೂರಿನ ಅನಂತಪದ್ಮನಾಭ ದೇವರಿಗೆ ಬಾಳೆಹಣ್ಣು ಅರ್ಪಿಸುತ್ತಾರೆ. ಆ ಪ್ರದೇಶದಲ್ಲಿ ಹೆಚ್ಚಾಗಿ ಬಾಳೆ ಬೆಳೆಯುವುದನ್ನು ನೋಡ ಬಹುದು. ಆದ್ದರಿಂದ ಇದರಲ್ಲಿ ಒಂದು ಆರ್ಥಿಕ ಲೆಕ್ಕಾಚಾರವೂ ಇದೆ’ ಎಂದರು.

ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಆಂತೋನಿ ಮರಿಯಾ ಇಮಾ ನ್ಯುಯಲ್, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ, ಎನ್ಬಿಎಐಆರ್ ವಿಜ್ಞಾನಿ ಡಾ.ಶೈಲೇಶ್, ಸೆಲ್ವರಾಜು, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ಧನಂಜಯ, ಪತ್ರಕರ್ತ ಯು.ಕೆ. ಕುಮಾರನಾಥ ಇದ್ದರು.

ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಇದ್ದಾಗ ನೀರಾ ಇಳಿಸುವುದರ ಮೇಲೆ ನಿರ್ಬಂಧ ವಿಧಿಸಿದ್ದರು. ಆದರೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ರಿಯಾಯಿತಿ ಪಡೆದುಕೊಳ್ಳಲಾಗಿತ್ತು.
ಪ್ರಮೋದ್ ಮಧ್ವರಾಜ್, ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.