ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಿಂದ ಕುಸಿದ ಸೇತುವೆ; ಸಂಚಾರಕ್ಕೆ ಸಂಚಕಾರ

Last Updated 22 ಜೂನ್ 2018, 16:29 IST
ಅಕ್ಷರ ಗಾತ್ರ

ರೋಣ: ರೋಣ ಪಟ್ಟಣದಿಂದ ಜಿಗಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಬಿದ್ದಿದ್ದು ಸಾರ್ವಜನಿಕರು, ಸವಾರರು ಪರದಾಡುವಂತಾಗಿದೆ. ಸೇತುವೆ ಎಂಟು ತಿಂಗಳ ಹಿಂದೆ ಕುಸಿದಿತ್ತು. ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಸಂಪೂರ್ಣ ಹಾಳಾಗಿದೆ.

ಪ್ರತಿನಿತ್ಯ ಈ ಮಾರ್ಗವಾಗಿ ರೈತರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಿದ್ದು, ಸೇತುವೆ ಕುಸಿದಿರುವುದರಿಂದ ಪರದಾಡುವಂತಾಗಿದೆ. ಟ್ರಾಕ್ಟರ್, ಕಾರು, ಬಸ್ ಸೇರಿದಂತೆ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನ ಸವಾರರು ಹರಸಾಹಸ ಪಟ್ಟು ಸೇತುವೆ ದಾಟಬೇಕು.

‘ಸೇತುವೆ ಕುಸಿದಿರುವ ಕುರಿತು ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನಾ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ, ಸಮಸ್ಯೆ ಇತ್ಯರ್ಥಗೊಂಡಿಲ್ಲ. ಜಿಗಳೂರಿನಿಂದ ರೋಣ ಪಟ್ಟಣಕ್ಕೆ 5 ಕಿ.ಮೀ ಮಳೆಯಿಂದಾಗಿ ಸೇತುವೆ ಸಂಪೂರ್ಣ ಕುಸಿದಿದ್ದು, ವಾಹನ ಸವಾರರಿಗೆ ಹಾಗೂ ರೈತರಿಗೆ ಹೊಲಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಅಧಿಕಾರಿಗಳು ಶೀಘ್ರವೆ ಸೇತುವೆ ಸರಿಪಡಿಸಬೇಕು’ ಎಂದು ಜಿಗಳೂರು ಗ್ರಾಮಸ್ಥ ಬಸವರಾಜ ಬದಾಮಿ ಒತ್ತಾಯಿಸಿದರು.

ಹಳ್ಳದಲ್ಲಿ ಪ್ರವಾಹ ಬಂದಿದ್ದರಿಂದ ಸೇತುವೆ ಸಂಪೂರ್ಣ ಹಾಳಾಗಿದೆ. ಜಿಲ್ಲಾಡಳಿತಕ್ಕೆ ಅನುದಾನ ಬಿಡುಗಡೆ ಮಾಡುವಂತೆ ವರದಿ ಸಲ್ಲಿಸಲಾಗಿದೆ. ಹಣ ಬಂದ ತಕ್ಷಣ ಕೆಲಸ ಪ್ರಾರಂಭಿಸುತ್ತೆವೆ.–ಅಶೋಕ ಚಲವಾದಿ, ಎಂಜಿನಿಯರ್‌, ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ ರೋಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT