ನರೇಗಲ್: ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಲ್ಲಿ ಕೆಲವರು ಕೆಲಸದ ವೇಳೆ ಮದ್ಯ ಸೇವಿಸಿ ಸಮವಸ್ತ್ರದಲ್ಲಿಯೇ ರಸ್ತೆ ಬದಿ, ಕದ ಹಾಕಿರುವ ಅಂಗಡಿ ಎದುರು ಮಲಗುತ್ತಿದ್ದಾರೆ. ಇವರಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಿಳಿವಳಿಕೆ ನೀಡಬೇಕು ಹಾಗೂ ಪುನರಾವರ್ತನೆ ಆಗದಂತೆ ಎಚ್ಚರಿಕೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕುಡಿತದ ಚಟಕ್ಕೆ ಅಂಟಿಕೊಂಡಿರುವ ಕಾರ್ಮಿಕರು ಬೆಳಿಗ್ಗೆ ಅಥವಾ ಮಧ್ಯಾಹ್ನದ ವೇಳೆ ಕುಡಿಯಲು ಮುಂದಾಗುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಅವರಿಗೆ ವಹಿಸಿದ ಕೆಲಸವನ್ನು ಮಾಡದೇ ಎಲ್ಲೆಂದೆರಲ್ಲಿ ನಶೆಯಲ್ಲಿ ಹೋಗಿರುತ್ತಾರೆ. ದಿನವೂ ಸರಿಯಾಗಿ ಕೆಲಸ ಮಾಡುವ ಕಾರ್ಮಿಕರಿಗೂ ಸಹ ಇಂತಹ ಕುಡುಕರಿಂದ ಮುಜುಗರ ಅನುಭವಿಸುತ್ತಿದ್ದಾರೆ.

ಪಟ್ಟಣದ ನಿಜವಾದ ಆರೋಗ್ಯ ಸೇವಕರಾಗಿರುವ ಪೌರಕಾರ್ಮಿಕರನ್ನು ಎಲ್ಲರೂ ಗೌರವದಿಂದ ಕಾಣುತ್ತಾರೆ. ಆದರೆ ಕುಡುಕರ ಸಂಖ್ಯೆ ಹೆಚ್ಚಾಗದಂತೆ ಜಾಗೃತಿ ವಹಿಸಬೇಕು. ಅವರಿಗೆ ಕೌನ್ಸಲಿಂಗ್ ಮಾಡಿ ತಿಳಿವಳಿಕೆ ನೀಡಬೇಕು. ಆಗ ಕುಡಿತದ ಚಟಬಿಡುತ್ತಾರೆ ಎಂದು ಹಿರಿಯ ನಾಗರಿಕ ರಾಜೇಂದ್ರ ಜಕ್ಕಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.