ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಪೋಕ್ಸೊ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ

Published 3 ಸೆಪ್ಟೆಂಬರ್ 2023, 21:27 IST
Last Updated 3 ಸೆಪ್ಟೆಂಬರ್ 2023, 21:27 IST
ಅಕ್ಷರ ಗಾತ್ರ

ಗದಗ: ಪೋಕ್ಸೊ ಸಂತ್ರಸ್ತೆಯಾಗಿ ನಗರದ ಬಾಲಕಿಯರ ಸರ್ಕಾರಿ ಬಾಲ ಮಂದಿರದಲ್ಲಿ ರಕ್ಷಣೆಯಲ್ಲಿದ್ದ 16 ವರ್ಷದ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದು, ಈ ಸಂಬಂಧ ಗದಗ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಆ.26ರಂದು ಪ್ರಕರಣ ದಾಖಲಾಗಿದೆ.

‘ಐದು ವರ್ಷಗಳಿಂದ ಸರ್ಕಾರಿ ಬಾಲ ಮಂದಿರದಲ್ಲಿದ್ದ ಸಂತ್ರಸ್ತ ಬಾಲಕಿಯನ್ನು ಆಕೆಯ ತಂದೆ ಆಗಾಗ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಅದೇ ರೀತಿಯಾಗಿ, ಆ.17ರಂದು ಬಂದಿದ್ದ ತಂದೆ ಹುಡುಗಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಮರಳಿ ಬಂದ ಮೇಲೆ ಬಾಲಮಂದಿರದ ಅಧೀಕ್ಷಕಿ ಬಾಲಕಿಯನ್ನು ವಿಚಾರಿಸಿ, ಸಮಾಲೋಚನೆ ನಡೆಸಿದ ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದು ಬಂದಿದೆ’ ಎಂದು ಜಿಲ್ಲಾ ಮಕ್ಕಳಾ ರಕ್ಷಣಾಧಿಕಾರಿ ರಾಧಾ ಮಣ್ಣೂರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸಂತ್ರಸ್ತ ಬಾಲಕಿ ಐದು ವರ್ಷಗಳಿಂದ ಬಾಲ ಮಂದಿರದಲ್ಲೇ ಇದ್ದಳು. ಖಿನ್ನತೆಗೆ ಒಳಗಾಗಿದ್ದ ಆಕೆಗೆ ನಿಯಮಿತವಾಗಿ ಮನೋವೈದ್ಯರಿಂದ ಚಿಕಿತ್ಸೆ, ಸಮಾಲೋಚನೆ ಮಾಡಿಸಲಾಗುತ್ತಿತ್ತು. ಕ್ರಮೇಣ ಆಕೆಯ ಆರೋಗ್ಯ ಸುಧಾರಿಸಿತ್ತು. ಬಾಲಕಿಯನ್ನು ಆಕೆಯ ತಂದೆಯೊಂದಿಗೆ ಆಗಾಗ ಕಳಿಸಿಕೊಡಲಾಗುತ್ತಿತ್ತು.  ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸಕಾರಣ ಕೊಟ್ಟು ನಾಲ್ಕು ಬಾರಿ ಮಗಳನ್ನು ತಂದೆ ತನ್ನ ಜತೆಗೆ ಕರೆದುಕೊಂಡು ಹೋಗಿದ್ದಾರೆ’ ಎಂದು ತಿಳಿಸಿದರು. ‌

‘ತಂದೆಗೆ ಪರಿಚಯವಿರುವ ವ್ಯಕ್ತಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಹಿಂದೆ ತಂದೆ ಜತೆಗೆ ಮನೆಗೆ ಹೋಗಿದ್ದ ಸಂದರ್ಭದಲ್ಲೂ ಆ ವ್ಯಕ್ತಿಯೇ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಸಂತ್ರಸ್ತ ಬಾಲಕಿ ತಿಳಿಸಿದ್ದಾಳೆ. ಅದರಂತೆ, ಹಾಸ್ಟೆಲ್‌ನ ಅಧೀಕ್ಷಕಿ ತಕ್ಷಣವೇ ಮೇಲಧಿಕಾರಿಗಳಿಗೆ ವಿಷಯ ತಿಳಿಸಿ, ಪ್ರಕರಣ ದಾಖಲಿಸಿದ್ದಾರೆ’ ಎಂದು ಅವರು ತಿಳಿಸಿದರು. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT