ಶಿರಹಟ್ಟಿ: ತಾಲ್ಲೂಕಿನ ಶ್ರೀಮಂತಗಡ ಗ್ರಾಮದ ಹೊಳಮ್ಮದೇವಿಯ ಮಹಾರಥೋತ್ಸವವು ಭಾನುವಾರ ಸಂಜೆ ಅಪಾರ ಭಕ್ತ ನಡುವೆ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ 6 ಗಂಟೆಗೆ ದೇವಿಗೆ ರುದ್ರಾಭಿಷೇಕ, ಉಡಿ ತುಂಬುವುದರ ಮೂಲಕ ಮಹಾಪೂಜೆ ಸಲ್ಲಿಸಲಾಯಿತು. ನಂತರ ದೇವಸ್ಥಾನದ ಪರಂಪರೆಯಂತೆ ಮಹಿಳೆಯರಿಗೆ ಉಡಿ ತುಂಬುವುದು, ಪಡ್ಡಲಗಿ ತುಂಬಿ ಜೋಗು ಹಾಕುವ ಕಾರ್ಯಕ್ರಮ ತದನಂತರ ದೇವಸ್ಥಾನದ ಆವರಣದಲ್ಲಿ ದೇವಿಯ ಅಲಂಕೃತ ಮಂಟಪದಲ್ಲಿ ಪಲ್ಲಕ್ಕಿ ಸಮೇತ ಭವ್ಯ ಮೆರವಣಿಗೆ ನಡೆಯಿತು. ಛತ್ರಿ– ಚಾಮರ, ದಿವಟಗಿ, ಡೊಳ್ಳು ಕುಣಿತ ಸೇರಿದಂತೆ ಸಕಲ ವಾದ್ಯ ಮೇಳಗಳು ಮೆರವಣಿಗೆಗೆ ಮೆರುಗು ನೀಡಿದವು.

ಭಕ್ತರು ದೇವಿಯ ಉಧೋ ಉಧೋ ಎನ್ನುತ್ತಾ ಗುಡ್ಡದ ಆವರಣದಿಂದ ಬನ್ನಿಕಟ್ಟಿಯವರೆಗೆ ಮಹಾರಥವನ್ನು ಎಳೆದು ತಂದರು. ನೇರೆದಿದ್ದ ಜನಸ್ತೋಮವು ರಥದ ಕಳಸಕ್ಕೆ ಉತ್ತತ್ತಿ, ಲಿಂಬೆ ಹಣ್ಣನ್ನು ಎಸೆದು ಭಕ್ತಿ ಸಮರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.