ಶನಿವಾರ, ಫೆಬ್ರವರಿ 29, 2020
19 °C
ಬೆಳಗಿನ ಜಾವ 5 ಗಂಟೆಗೆ ಘಟನೆ; ಶಾರ್ಟ್‌ ಸರ್ಕೀಟ್‌ನಿಂದ ಅವಘಡ

ಗದಗ ಮಾರುಕಟ್ಟೆಯಲ್ಲಿ ಅಗ್ನಿ ದುರಂತ: ಸುಟ್ಟು ಕರಕಲಾದ ಮಳಿಗೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ (ಗ್ರೇನ್‌ ಮಾರುಕಟ್ಟೆ) ಮಂಗಳವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಅಗ್ನಿ ಆಕಸ್ಮಿಕ ಸಂಭವಿಸಿದ್ದು, 30ಕ್ಕೂ ಹೆಚ್ಚು ತರಕಾರಿ ಮತ್ತು ಕಿರಾಣಿ ಮಳಿಗೆಗಳು ಸುಟ್ಟು ಕರಕಲಾಗಿವೆ.

ನಸುಕಿನ 5 ಗಂಟೆ ಸುಮಾರಿಗೆ ಒಮ್ಮಲೆ ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸಿತು. ಮಳಿಗೆಗಳಲ್ಲಿ, ಮಾರುಕಟ್ಟೆಯ ಒಳಗೆ ಮಲಗಿದ್ದ ಕೆಲವು ಕಾರ್ಮಿಕರು ಬೆಂಕಿಯ ಝಳದಿಂದ ಎಚ್ಚರಗೊಂಡು, ಭಯದಿಂದ ಕೂಗುತ್ತಾ ಹೊರಗೋಡಿ ಬಂದರು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ‘ಆದರೆ, ಅಷ್ಟರಲ್ಲಾಗಲೇ, ಒಂದಕ್ಕೊಂದು ಹೊಂದಿಕೊಂಡಿರುವ ಮಳಿಗೆಗಳು ಸುಟ್ಟು ಕರಕಲಾಗಿದ್ದವು. ಹಣ್ಣು, ತರಕಾರಿ,ಕಿರಾಣಿ ಸಾಮಗ್ರಿ, ಬಿತ್ತನೆ ಬೀಜಗಳು ಸೇರಿದಂತೆ ₹1 ಕೋಟಿಗೂ ಹೆಚ್ಚಿನ ಹಾನಿಯಾಗಿದೆ’ ಎಂದು ಜಿಲ್ಲಾ ಕಾಳುಕಡಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಾಷಾಸಾಬ್‌ ಹೇಳಿದರು.

‘ನಸುಕಿನಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಜಾವ 6 ಗಂಟೆಯ ನಂತರ ಮಾರುಕಟ್ಟೆಯಲ್ಲಿ ಈ ಅಗ್ನಿ ಆಕಸ್ಮಿಕ ಸಂಭವಿಸಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು. ಸದ್ಯ ಬೆಂಕಿ ನಂದಿಸಲಾಗಿದ್ದು, ಹಾನಿ ಪ್ರಮಾಣ ಇನ್ನಷ್ಟೇ ತಿಳಿಯಬೇಕಿದೆ’ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು