ಗದಗ: ‘ಸೌಹಾರ್ದ ಮತ್ತು ಸಹಕಾರಕ್ಕೆ ಯಾವುದೇ ಜಾತಿ-ಧರ್ಮ ಇಲ್ಲ. ಜನರ ಸಹಕಾರ ಇಂದು ಎಲ್ಲ ರಂಗಕ್ಕೂ ಅವಶ್ಯಕತೆ ಇದೆ. ಮಹಿಳೆಯರು ಮನೆಯಿಂದ ಹೊರ ಬಂದು ಕೆಲಸ ನಿರ್ವಹಿಸಬೇಕು. ಆಗ ಮಾತ್ರ ಬೆಳೆಯಲು ಸಾಧ್ಯ. ಅಲ್ಲದೇ ಹೂಡಿಕೆ ಭಾವನೆಯನ್ನು ಮಹಿಳೆಯರಲ್ಲಿ ಹೆಚ್ಚು ಕಾಣುತ್ತೇವೆ’ ಎಂದು ದಿ ಕಾರ್ಪೊರೇಶನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಶಕುಂತಲಾ ರಾಜಶೇಖರ ಮುಳಗುಂದ ಹೇಳಿದರು.

ನಗರದಲ್ಲಿ ಗುರುವಾರ ನೂತನ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಮಹಿಳೆಯರಲ್ಲಿ ಮುಂದಾಲೋಚನೆ ವಿಚಾರಗಳು ಹೆಚ್ಚು ಇರುತ್ತವೆ. ತಾಳ್ಮೆ ಇದ್ದಲ್ಲಿ ಸಹಕಾರಿ ಸಂಘ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ’ ಎಂದರು.

ಸಹಕಾರಿ ಸಂಘ ಉದ್ಘಾಟಿಸಿದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ರಾಮನಗೌಡ ದಾನಪ್ಪಗೌಡರ ಮಾತನಾಡಿ, ‘ದೇಶದ ಆರ್ಥಿಕ ಶಕ್ತಿ ಹೆಚ್ಚಳದಲ್ಲಿ ಸಹಕಾರಿ ಸಂಘಗಳ ಪಾತ್ರ ಪ್ರಮುಖವಾಗಿದೆ. ಅದರಲ್ಲೂ ಮಹಿಳೆಯರು ಹೆಚ್ಚು ಉಳಿತಾಯ ಮತ್ತು ವಹಿವಾಟಿನ ಮೂಲಕ ಗಮನ ಸೆಳೆಯುತ್ತಿದ್ದಾರೆ. ಗದಗ ನಗರದಲ್ಲೂ ಮಹಿಳೆಯರ ನೇತೃತ್ವದ ಸಹಕಾರಿ ಸಂಘಗಳು ಉತ್ತಮವಾಗಿ ಬೆಳೆಯುವಂತಾಗಲಿ’ ಎಂದು ಹೇಳಿದರು.

ರೋಣ ಸಿಡಿಒ ಪ್ರಶಾಂತ್ ಮುಧೋಳ ಮಾತನಾಡಿ, ‘ಮಹಿಳೆಯರಿಗೆ ಅವಕಾಶ ಕೊಟ್ಟರೆ ಸಾಕು ಬೆಳೆಯುವ ಛಲ ಅವರಲ್ಲಿದೆ. ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಅಥಣಿ ಭಾಗದಲ್ಲಿ ಹೆಚ್ಚು ಸಹಕಾರಿ ಸಂಘಗಳಿವೆ. ಕರಾವಳಿ ಭಾಗದಲ್ಲಿಯೂ ಸಹಕಾರಿ ಸಂಘಗಳು ಪ್ರಬಲವಾಗಿ ಬೆಳೆಯುತ್ತಿವೆ. ಅದೇ ರೀತಿ ಗದಗ ಭಾಗದಲ್ಲಿ ಸಹಕಾರಿ ಸಂಘಗಳು ಬೆಳೆಯಬೇಕು. ವಿದೇಶಿ ಮಹಿಳೆಯರಿಗೆ ಹೊಲಿಸಿದಾಗ ಭಾರತೀಯ ಮಹಿಳೆಯರು ಹೆಚ್ಚು ಹಣ ಉಳಿತಾಯ ಮಾಡುತ್ತಾರೆ. ಇದರಿಂದಾಗಿ ಭಾರತ ಜಗತ್ತಿನ 4 ಆರ್ಥಿಕ ದೇಶವಾಗಿ ಹೊರಹೊಮ್ಮಲು ಸಾಧ್ಯವಾಗಿದೆ’ ಎಂದರು.

ಪತ್ರಕರ್ತ ಆನಂದಯ್ಯ ವಿರಕ್ತಮಠ, ನಗರಸಭೆ ಸದಸ್ಯ ಪ್ರಕಾಶ್ ಅಂಗಡಿ ಮಾತನಾಡಿದರು.

ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ನಾಗರಾಜ ಮಹಾಬಲೇಶ್ವರ ಗಾವಡಿ, ಸಿಇಒ ಬಸನಗೌಡ ವೀರನಗೌಡ ಅಯ್ಯನಗೌಡರ, ನಿರ್ದೇಶಕರಾದ ರಾಜಶೇಖರ ಚ. ಮುಳಗುಂದ, ವೀರನಗೌಡ ಸಂ. ಅಯ್ಯನಗೌಡರ, ರಾಚನಗೌಡ ವೀ. ಅಯ್ಯನಗೌಡರ, ರಮ್ಯಾ ನಾ. ಗಾವಡಿ, ಶಶಿಕಲಾ ಮ. ಗಾವಡಿ, ಮಹಾಂತೇಶಗೌಡ ವೀ. ಅಯ್ಯನಗೌಡರ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.