ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ | ರಾಜ್ಯದಲ್ಲಿ ಇರುವುದು ಅತ್ಯಂತ ಭ್ರಷ್ಟ ಸರ್ಕಾರ: ಬೊಮ್ಮಾಯಿ ಆರೋಪ

Published 18 ಮಾರ್ಚ್ 2024, 16:19 IST
Last Updated 18 ಮಾರ್ಚ್ 2024, 16:19 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ರಾಜ್ಯದಲ್ಲಿರುವುದು ಅತ್ಯಂತ ಭ್ರಷ್ಟ ಸರ್ಕಾರ. ಯಾವುದೇ ಅಧಿಕಾರಿ ಅಥವಾ ಗುತ್ತಿಗೆದಾರರನ್ನು ಕೇಳಿದರೆ ಇದು ಸಾಬೀತಾಗುತ್ತದೆ. ಶೇ 45-50 ಕಮೀಷನ್‍ನ್ನು ಈ ಸರ್ಕಾರ ತೆಗೆದುಕೊಳ್ಳುತ್ತಿದೆ’ ಎಂದು ಹಾವೇರಿ-ಗದಗ ಲೋಕಸಭೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ರಂಭಾಪುರಿ ಸಮುದಾಯ ಭವನದಲ್ಲಿ ಸೋಮವಾರ ಜರುಗಿದ ಕಾರ್ಯಕರ್ತರ ಸಭೆಯಲ್ಲಿ  ಅವರು ಮಾತನಾಡಿದರು. ‘ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಶೇ 70ರಷ್ಟು ಜನರಿಗೆ ಯೋಜನೆಗಳು ಸಿಕ್ಕಿಲ್ಲ. ಇದೇನಾ ಸಿದ್ಧರಾಮಯ್ಯನವರ ಸಾಮಾಜಿಕ ನ್ಯಾಯ’ ಎಂದು ಅವರು ಕಿಡಿಕಾರಿದರು.

ವಿಧಾನಪರಿಷತ್ ಸದಸ್ಯ ಪ್ರೊ.ಎಸ್.ವಿ. ಸಂಕನೂರ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿದರು. ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಾಜು ಕುರುಡಗಿ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ.ಸಿ. ಪಾಟೀಲ. ಹೇಮಗಿರೀಶ ಹಾವಿನಾಳ. ಸುನೀಲ ಮಹಾಂತಶೆಟ್ಟರ, ಫಕ್ಕೀರೇಶ ರಟ್ಟಿಹಳ್ಳಿ, ವಿಶ್ವನಾಥ ಕಪ್ಪತ್ತನವರ, ಉಮೇಶಗೌಡ ಪಾಟೀಲ, ಚಂಬಣ್ಣ ಬಾಳಿಕಾಯಿ, ನವೀನ ಬೆಳ್ಳಟ್ಟಿ, ನಿಂಗಪ್ಪ ಬನ್ನಿ, ಅಶ್ವಿನಿ ಅಂಕಲಕೋಟಿ, ಸುಭಾಷ್ ಬಟಗುರ್ಕಿ, ಬಿ.ಡಿ. ಪಲ್ಲೆದ, ಸಿದ್ದರಾಮಪ್ಪ ಮೊರಬದ, ಜಾನು ಲಮಾಣಿ, ರೇಖಾ ಅಳವಂಡಿ, ಡಾ.ಶೇಖರ ಸಜ್ಜನರ, ಪೂರ್ಣಾಜಿ ಖರಾಟೆ, ಸೋಮಣ್ಣ ಡಾಣಗಲ್ಲ, ಪ್ರವೀಣ ಬಾಳಿಕಾಯಿ, ನೀಲಪ್ಪ ಹತ್ತಿ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ಮಂಜುನಾಥ ಕೆಂಚನಗೌಡರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT