ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಗನೂರು ಗ್ರಾಮ ಪಂಚಾಯ್ತಿಯಲ್ಲಿ ಜಯದ ಕೇಕೆ; ಅತ್ತೆ ಎದುರು ಗೆದ್ದ ಸೊಸೆ

Last Updated 30 ಡಿಸೆಂಬರ್ 2020, 14:35 IST
ಅಕ್ಷರ ಗಾತ್ರ

ಶಿರಹಟ್ಟಿ: ತಾಲ್ಲೂಕಿನ ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶಕ್ಕಾಗಿ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರ ಜನ ಕುತೂಹಲದಿಂದ ಕಾಯುತ್ತಿದ್ದರು.

ಅಂತರ ಮತ್ತು ಮಾಸ್ಕ್‌ ಧರಿಸದ ಸಾವಿರಾರೂ ಜನ ಗುಂಪು ಗುಂಪಾಗಿ ನಿಂತಿದ್ದು ಸಾಮಾನ್ಯವಾಗಿತ್ತು. ಕೋವಿಡ್-19 ಮಾರ್ಗಸೂಚಿಗಳು ಪಾಲನೆಯಾಗದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ತಾಲ್ಲೂಕಿನ 14 ಗ್ರಾಮ ಪಂಚಾಯ್ತಿಯ ಮತಎಣಿಕೆ ಕಾರ್ಯ ಪಟ್ಟಣದ ಎಫ್.ಎಂ.ಡಬಾಲಿ ಕಾಲೇಜಿನಲ್ಲಿ ನಡೆಯಿತು. ಬುಧವಾರ ಸಂಜೆ 7 ಗಂಟೆ ವೇಳೆಗೆ ಹೆಬ್ಬಾಳ, ಛಬ್ಬಿ, ಕಡಕೋಳ, ಕೊಂಚಿಗೇರಿ ಗ್ರಾಮ ಪಂಚಾಯ್ತಿಗಳ ಫಲಿತಾಂಶ ಘೋಷಣೆಯಾಗಿದೆ.

75 ಕ್ಷೇತ್ರಗಳ ಪೈಕಿ 52 ಕ್ಷೇತ್ರಗಳ ಫಲಿತಾಂಶ ಬಂದಿದ್ದು, 182 ಅಭ್ಯರ್ಥಿಗಳ ಪೈಕಿ 130 ಅಭ್ಯರ್ಥಿಗಳ ಫಲಿತಾಂಶ ಪ್ರಕಟಗೊಂಡಿದೆ. ತಾಲ್ಲೂಕಿನ ಕೊಗನೂರು ಗ್ರಾಮ ಪಂಚಾಯ್ತಿ ಒಂದೇ ಕ್ಷೇತ್ರದಲ್ಲಿ ಅತ್ತೆ ಹಾಗೂ ಸೊಸೆ ಸ್ಪರ್ಧಿಸಿದ್ದು, 6 ಮತಗಳ ಅಂತರದಿಂದ ಸೊಸೆ ಪಾರವ್ವ ಬಸಪ್ಪ ಮೇಲಿನಮನಿ ಗೆಲುವು ಸಾಧಿಸಿದ್ದಾರೆ.

ಮತ ಎಣಿಕೆ ಕೇಂದ್ರದ ಸಮೀಪದಲ್ಲಿ ವಿಜಯೋತ್ಸವದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ತೊಡಗಿದ್ದರು. ಅವರ ಮೇಲೆ ಪೋಲಿಸರು ಲಘು ಲಾಠಿ ಪ್ರಹಾರ ಮಾಡಿದರು. ಕೊಂಚಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಕ್ಕರಗೊಂದಿ ಗ್ರಾಮದ ಶಾಂತಪ್ಪ ಕಟ್ಟಿಮನಿ ಹಾಗೂ ಕೋಟೆಪ್ಪ ಹರಿಜನ ಸಮಾನ ಮತಗಳನ್ನು ಪಡೆದಿದ್ದರು. ಚೀಟಿ ಎತ್ತುವುದರ ಮೂಲಕ ಶಾಂತಪ್ಪ ಕಟ್ಟಿಮನಿ ಹೆಚ್ಚುವರಿ ಮತ ಪಡೆದುಕೊಂಡು ಆಯ್ಕೆಯಾದರು.

ಬೆಳ್ಳಟ್ಟಿ ಮತ್ತು ಛಬ್ಬಿ ಗ್ರಾಮ ಪಂಚಾಯ್ತಿಯಲ್ಲೂ ಚೀಟಿ ಎತ್ತುವುದರ ಮೂಲಕ ಅಭ್ಯರ್ಥಿಗಳ ಆಯ್ಕೆಯಾದರು. ತಾಲ್ಲೂಕಿನಲ್ಲಿ 130 ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳ ಪೈಕಿ 91 ಅಭ್ಯರ್ಥಿಗಳು ಜಯಶಾಲಿಯಾಗಿದ್ದು, ಮಾಗಿಡಿ, ಮಾಚೇನಹಳ್ಳಿ ಗ್ರಾಮ ಪಂಚಾಯ್ತಿಗಳಲ್ಲಿ ಬಹುಮತ ಪಡೆಯಲಾಗಿದೆ ಎಂದು ಶಿರಹಟ್ಟಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹುಮಾಯೂನ್‌ ಮಾಗಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT