ಸುಮಾರು 20 ಸಾವಿರ ಜನಸಖ್ಯೆ ಹೊಂದಿದ ಸುತ್ತಲಿನ 26 ಹಳ್ಳಿಗಳ ಹೋಬಳಿ ಕೇಂದ್ರ ಹಾಗೂ ಶೈಕ್ಷಣಿಕ ಕೇಂದ್ರವಾದ ಹೊಳೆಆಲೂರಿಗೆ ಸಮರ್ಪಕ ಸಾರಿಗೆ ಸೌಕರ್ಯವಿಲ್ಲದೇ ಸಾರ್ವಜನಿಕರು , ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ತಾಲ್ಲೂಕಿನ ಎಪಿಎಂಸಿ ಪ್ರಧಾನ ಮಾರುಕಟ್ಟೆ ಹೊಂದಿರುವ ಹೊಳೆಆಲೂರಿಗೆ ಅಮರಗೋಳ, ಹಡಗಲಿ ,ಬಸರಕೋಡ ,ಬೆಲೇರಿ ,ನೈನಾಪುರ, ಸೋಮನಕಟ್ಟಿ ಗ್ರಾಮ ಗಳಿಂದ ರೈತರು ತಮ್ಮ ಹುಟ್ಟುವಳಿ ಮಾರಾಟಕ್ಕೆ ಹಾಗೂ ಬೀಜ ಗೂಬ್ಬರ ಸಂತೆ ಪೇಟೆಗೆ ಹೊಳೆಆಲೂರಿಗೆ ಬರಲೇಬೇಕು.

ಆದರೆ, ಈ ಊರುಗಳ ಜನರು ಖಾಸಗಿ ವಾಹನಗಳನ್ನೆ ಅವಲಂಬಿಸ ಬೇಕಾಗಿದೆ. ಕೇವಲ 15 ಕೀ ಮೀ ವ್ಯಾಪ್ತಿಯ ಈ ಗ್ರಾಮಗಳಿಗೆ ಸರ್ಕಾರಿ ಸಾರಿಗೆ ಸೌಲಭ್ಯವಿಲ್ಲ ಎಂಬುದು ಆಶ್ಚರ್ಯ ಎನಿಸಿದರೂ ಸತ್ಯ ಸಂಗತಿ. ಇನ್ನೂ ವಿದ್ಯಾರ್ಥಿಗಳ ಪಾಡಂತೂ ಹೇಳತೀರದು.

6ಪ್ರಾಥಮಿಕ 5 ಪ್ರೌಢ 4 ಕೈಗಾರಿಕಾ ತರಬೇತಿ, 1 ಪದವಿ ಕಾಲೇಜು ಹೊಂದಿರುವ ಹೊಳೆ ಆಲೂರಿಗೆ ಬೆನಹಾಳ ಹುನಗುಂಡಿ ಕುರಹಟ್ಟಿ ನೀರಲಗಿ ಕಾತರಕಿ ಹುಲ್ಲೂರ ಅಸೂಟಿ ಕರಮಡಿ ಮಾಳವಾಡ ರೋಣ ಗ್ರಾಮಗಳಿಂದ ಸುಮಾರು 300 ಪಾಸ್ ಹೊಂದಿರುವ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ನಿತ್ಯವೂ ಬಸ್ ಟಾಪ್ನಲ್ಲಿ ಪ್ರಯಾಣ ಮಾಡಬೇಕು.

ಬಸ್ಪಾಸ್ ಇದ್ದರೂ ಟಂಟಂ ವಾಹನ ಹಿಡಿದು ಶಾಲೆಗೆ ಹಾಜರಾಗ ಬೇಕಾಗಿದೆ. ಬದಾಮಿ ಕಡೆಯಿಂದ ಬೆಳಿಗ್ಗೆ 8ಕ್ಕೆ ಬಂದರೆ ಇನ್ನೂಂದು ಮಧ್ಯಾಹ್ನ 1 ಗಂಟೆಗೆ ಬರುತ್ತದೆ. ಇನ್ನೂ ರೋಣದ ಕಡೆಯಿಂದ ಬೆಳಗಿನ 6ರಿಂದ 8ಒಳಗೆ ಒಂದರ ಮೇಲೂಂದು ನಾಲ್ಕು ಬಸ್ ಬರುತ್ತವೆ.

ಇದರ ಬದಲಾಗಿ ಗಂಟೆಗೊಂದರಂತೆ ಬಸ್ ಬಿಡುವ ವ್ಯವಸ್ಥೆಯಾಗಬೇಕು. 9 ಗಂಟೆಗೆ ಬರುವ ರೋಣ-ಮಾಳವಾಡ ಬಸ್ ವಿದ್ಯಾರ್ಥಿಗಳನ್ನು ಕುರಿಯಂತೆ ತುಂಬಿಕೂಂಡು ಬರಲಾಗುತ್ತದೆ. ನಂತರ 9-30 ರ ಸುಮಾರಿಗೆ ಇನ್ನೂಂದು ಬಸ್ ಬಿಟ್ಟರೆ ಈ ಭಾಗದ ಸುಮಾರು 200 ವಿದ್ಯಾರ್ಥಿಗಳಿಗೆ ಅನು ಕೂಲವಾಗಿತ್ತದೆ ಎನ್ನತ್ತಾರೆ ಕಲ್ಮೇಶ್ವರ ಕಾಲೇಜಿನ ಪ್ರಾಚಾರ್ಯ ಬಿ.ಬಿ ಬಿಜ್ಜರಗಿ.

ಸಂಜೆ ಶಾಲೆಯ ಬಿಡುವಿನ ನಂತರವೂ ಚಿಕ್ಕ ಮಕ್ಕಳು ಮನೆ ತಲುಪಲು ಬಸ್ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ಪಾಲಕರೆ ತಮ್ಮಮ್ಮ ದ್ವಿಚಕ್ರ ವಾಹನದಲ್ಲಿ ಕರೆದುಕೂಂಡು ಹೋಗುತ್ತವೆ ಎನ್ನುತ್ತಾರೆ ಹಡಗಲಿ ಗ್ರಾಮದ ಶ್ರೀನಿವಾಸ ಕುಲಕರ್ಣಿ. ಸರ್ಕಾರ ವಿದ್ಯಾರ್ಥಿಗಳ ಅನುಕೂಲ ಕ್ಕಾಗಿ ಪಾಸ್ ವ್ಯವಸ್ಥೆ ಮಾಡಿದ್ದರೂ ನಮ್ಮ ಭಾಗದಲ್ಲಿ ಅದು ಸದುಪಯೋಗ ವಾಗುತ್ತಿಲ್ಲ.

ಬಡ ಮಕ್ಕಳು ಹಣ ತೆತ್ತು ಪ್ರಯಾಣಿಸಿ ವಿದ್ಯೆ ಕಲಿಯಬೇಕಾಗಿದೆ. ಇದನ್ನು ಅಧಿಕಾರಿಗಳು ಗಮನಿಸಬೇಕು ಎನ್ನತ್ತಾರೆ ಗ್ರಾ.ಪಂ ಮಾಜಿ ಸದಸ್ಯ ಯಲ್ಲಪ್ಪ ಚೌಡಣ್ಣವರ.

ಸಮಸ್ಯೆ ಬಗೆಹರಿಸಬೇಕೆಂದು ಶಾಸಕರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದು ಬಗೆ ಹರಿಸುವ ವಿಶ್ವಾಸವಿದೆ ಎನ್ನುತ್ತಾರೆ ಮಾಳವಾಡ ಗ್ರಾಮದ ಬುಡ್ಡನಗೌಡ ಪಾಟೀಲ.

ಬಸ್ ಟಾಪ್ ಪ್ರಯಾಣ ಮಾಡುತ್ತಿರವ ವಿದ್ಯಾರ್ಥಿಗಳ ಸಂಕಷ್ಟ ತಪ್ಪಿಸಬೇಕಾಗಿದೆ. ಈ ಭಾಗದಲ್ಲಿ ಬಸ್ ಸಂಖ್ಯೆ ಹೆಚ್ಚಿಸಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಜನರ ಅಪೇಕ್ಷೆಯಾಗಿದೆ.
ಬಸವರಾಜ ಪಟ್ಟಣಶೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.