ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಸಾಹಿತ್ಯಕ್ಕೆ ಪ್ರೇರಣೆ ನೀಡಿದ ಇಂಗ್ಲಿಷ್ ಶಿಕ್ಷಣ’

Last Updated 18 ಡಿಸೆಂಬರ್ 2013, 4:37 IST
ಅಕ್ಷರ ಗಾತ್ರ

ಗದಗ: ಕನ್ನಡ ಸಾಹಿತ್ಯ ರಾಜಾಶ್ರಯ ದಿಂದ ಮುಕ್ತಿ ಪಡೆದು, ಇಂಗ್ಲಿಷ್ ಶಿಕ್ಷಣ ಪದ್ಧತಿಯು ಮತ್ತು ಕ್ರೈಸ್ತ ಮಿಶನರಿಗಳ ಧರ್ಮ ಪ್ರಚಾರದಿಂದ ಕನ್ನಡ ಸಾಹಿತ್ಯದ ಹೊಸತನಕ್ಕೆ ಪ್ರೇರಣೆ ನೀಡಿದೆ ಎಂದು ತೋಂಟದಾರ್ಯ ತಾಂತ್ರಿಕ ಮಹಾವಿ ದ್ಯಾಲಯದ ಕನ್ನಡ ಉಪನ್ಯಾಸಕಿ ಡಾ. ರಶ್ಮಿ ಸುರೇಶ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಶನಿವಾರ ಸಾಹಿತ್ಯ ಸಂಜೆಯಲ್ಲಿ ಮಾತನಾಡಿದ ಅರು, ಆಧುನಿಕ ಕನ್ನಡ ಸಾಹಿತ್ಯದ ಕಾಲಘಟ್ಟದಲ್ಲಿ ಭಾವಗೀತೆ, ಕಥೆ, ಕಾದಂಬರಿ, ನಾಟಕ, ಲಲಿತ ಪ್ರಬಂಧ, ಪ್ರವಾಸ ಕಥನ, ಆತ್ಮಚರಿತ್ರೆ ಮುಂತಾದ ಸಾಹಿತ್ಯ ರೂಪಗಳ ಸಮೃ ದ್ಧತೆ ಪಡೆಯಿತು. ಪ್ರಕೃತಿ ಆರಾಧನೆಯೇ ಪರಮ ಆರಾಧನೆ ಎಂಬ ಕಲ್ಪನೆಯನ್ನು ನವೋದಯ ಸಾಹಿತ್ಯ ಮೂಡಿಸಿತು. ಮೇವುಂಡಿ ಮಲ್ಲಾರಿ, ಹುಯಿಲಗೋಳ ನಾರಾಯಣ, ಆಲೂರು ವೆಂಕಟ ರಾಯರು, ಡಾ. ಗಿರಡ್ಡಿ ಗೋವಿಂದ ರಾಜ, ಡಾ.ಸೋಮಶೇಖರ ಇಮ್ರಾ ಪೂರ,  ಡಾ. ಆರ್‌.ಸಿ. ಹಿರೇಮಠ, ಡಾ. ಸು. ರಂ. ಯಕ್ಕುಂಡಿ, ಡಾ. ಡಿ. ಎಸ್. ಕರ್ಕಿ, ರಂ ಶ್ರೀ ಮುಗಳಿ, ಚನ್ನವೀರ ಕಣವಿ, ಡಾ. ಜಿ. ಎಸ್. ಆಮೂರ, ಕರವೀರಪ್ಪನವರು ಅಂಗಡಿ ಮುಂತಾ ದವರು ನವೋದಯ ಸಾಹಿತ್ಯ ಹುಲಸಾಗಿ ಬೆಳೆಯಲು ಕಾರಣಿಕರ್ತರು ಎಂದು ನುಡಿದರು.

ಇಂಗ್ಲಿಷ್‌ನ ರೋಮ್ಯಾಂಟಿಕ್ ಪದ ಕನ್ನಡದ ನವೋದಯ ಹೆಸರಿನ ಪರಿಕಲ್ಪನೆಯಾಗಿದೆ. ಬಿ. ಎಂ. ಶ್ರೀಕಂಠ ಯ್ಯನವರ ಇಂಗ್ಲಿಷ್ ಭಾವಗೀತೆಗಳು ನವೋದಯದ ಆರಂಭದ ಇತಿಹಾ ಸವನ್ನು ಹೇಳುತ್ತದೆ. ನವೋದಯದ ಮುಂಗೋಳಿ ಮುದ್ದಣ್ಣ, ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ, ಗೋಕಾಕ, ತಿ.ನಂ. ಶ್ರೀ, ಪುತಿನ, ಡಿವಿಜಿ, ಮುಂತಾ ದವರು ನವೋದಯ ಸಾಹಿತ್ಯದ ಆರಂಭಿಕ ಕೃಷಿ ಮಾಡಿದವರು. ಎಂ. ಎಸ್. ಪುಟ್ಟಣ್ಣನವರ ಮಾಡಿದ್ದುಣ್ಣೋ ಮಾಹಾರಾಯ ಹೊಸಗನ್ನಡ ಸಾಹಿತ್ಯದ ಆರಂಭಿಕ ಕಾದಂಬರಿ. ನವೋದಯ ಸಾಹಿತ್ಯ ಘಟ್ಟವು ರಾಷ್ಟ್ರೀ ಯತೆ ಮತ್ತು ಪ್ರಾದೇಶಿಕ ಕಲ್ಪನೆಯನ್ನು ಘಟ್ಟಿಗೊಳಿಸಿತು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ  ಡಾ.ಶಿವಪ್ಪ ಕುರಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ  ಹೊಸತನ ಕೊಟ್ಟ ನವೋದಯ ಸಾಹಿ ತ್ಯವು ಬದುಕಿನ ಹೊಸ ನೆಲೆಗಟ್ಟು ಒದಗಿ ಸಿದ ಸತ್ಯ ಸಂಜೀವಿನಿಯಾಗಿದೆ ಎಂದರು.

ಉದಯೋನ್ಮುಖ ಸಾಹಿತಿ ಕಲಾವತಿ ತಡಸದ ಅವರು ಸ್ವರಚಿತ ಕವನ ವಾಚಿಸಿದರು. ಪ್ರಾಚಾರ್ಯ ಕೆ. ಎಚ್. ಬೇಲೂರ, ಅ. ದ.ಕಟ್ಟಿಮನಿ, ಎ. ಎಸ್. ಮಕಾನದಾರ, ಎಚ್. ಟಿ. ಸಂಜೀವ ಸ್ವಾಮಿ, ಬಸವರಾಜ ವಾರಿ, ಶಂಕರ ಗಾಣಿಗೇರ, ಪ್ರಕಾಶ ಗಿಡ್ಡಣ್ಣನವರ, ವಾಸುದೇವ ಹೂಲಿ,  ರಮೇಶ ಸಜಗಾರ, ಮಲ್ಲಿಕಾರ್ಜುನ ಪೂಜಾರ, ಜಯಶ್ರೀ ಅಂಗಡಿ,  ಶೋಭಾ ಶಲವಡಿ, ಡಾ. ರಾಜೇಂದ್ರ ಗಡಾದ, ಎಸ್. ಎಫ್. ಹಡಪದ, ವಿಶ್ವನಾಥ ಕಮ್ಮಾರ,  ಶಶಿಕಾಂತ ಕೊರ್ಲಹಳ್ಳಿ, ಶಿಕ್ಷಕ ಸಂಘದ ಅಧ್ಯಕ್ಷ ಡಿ. ಎಸ್. ತಳವಾರ, ಆರ್. ಕೆ. ಬಾಗವಾನ, ರೇಣುಕಾ ಬಣಕಾರ, ಲಲಿತಾ ಬೇಲೂರ,  ಗೋಟೂರ, ಎ. ಟಿ. ಮೇಗಡಿ,  ಸುರೇಶ ಬಳಿಗಾರ ಪಾಲ್ಗೊಂಡಿದ್ದರು. ಭಾಗ್ಯಶ್ರೀ ಘಳಗಿ ಪ್ರಾರ್ಥಿಸಿದರು, ಡಾ. ಸಂಗಮೇಶ ತಮ್ಮನಗೌಡ್ರ ಸ್ವಾಗತಿಸಿದರು,  ಮಲ್ಲೇಶ ಡಿ. ಎಚ್. ನಿರೂಪಿಸಿದರು, ಬಿ. ಎಸ್. ಹಿಂಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT