ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

101 ರಸ್ತೆ ಸೂಚನಾ ಫಲಕ ಕೊಡುಗೆ

Last Updated 24 ಜೂನ್ 2021, 13:20 IST
ಅಕ್ಷರ ಗಾತ್ರ

ಹಾಸನ: ಸಾರ್ವಜನಿಕರಿಗೆ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಲು 101 ಸಂಚಾರ ಸೂಚನಾ ಫಲಕಗಳನ್ನು ಯಕ್ಷ ಇಂಟೀರಿಯರ್ಸ್ ಸಂಸ್ಥೆಯು ಪೋಲಿಸ್ ಇಲಾಖೆಗೆ ಕೊಡುಗೆಯಾಗಿನೀಡಿದೆ.

ನಗರದ ಎನ್. ಆರ್. ವೃತ್ತದಲ್ಲಿ ಗುರುವಾರ ಬೋರ್ಡ್‍ಗಳನ್ನು ಹಸ್ತಾಂತರ ಮಾಡಿ ಮಾತನಾಡಿದ ಯಕ್ಷಇಂಟೀರಿಯರ್ ಸಂಸ್ಥೆ ಮಾಲೀಕ ಜಗದೀಶ್, ಸಂಚಾರ ನಿಯಮ ಪಾಲಿಸಲುಅನುಕೂಲವಾಗಲೆಂದು ಸೂಚನಾ ಫಲಕವನ್ನು ಪೋಲಿಸ್ ಇಲಾಖೆಗೆ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ವೃತ್ತ ಪೊಲೀಸ್ ನಿರೀಕ್ಷಕ ರೇಣುಕಾಪ್ರಸಾದ್ ಮಾತನಾಡಿ,‘ ಅಪಘಾತ ತಪ್ಪಿಸುವುದು ಮತ್ತು ಸುಗಮ ವಾಹನಗಳ ಸಂಚಾರಕ್ಕಾಗಿ ಪ್ರಮುಖ ರಸ್ತೆಗಳಲ್ಲಿ ಸೂಚನಾ ಫಲಕ ಅಳವಡಿಸಲಾಗುತ್ತಿದೆ. ಇದರಿಂದ ವಾಹನಸವಾರರು ಹಾಗೂ ಪಾದಚಾರಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಮದ್ಯ ಸೇವಿಸಿ ವಾಹನಚಾಲನೆ ಮಾಡುವುದು, ಮೊಬೈಲ್‌ನಲ್ಲಿ ಮಾತನಾಡುವುದು ಹಾಗೂ ಹೆಲ್ಮೆಟ್‌ ಧರಿಸದಿರುವುದುಅಪಘಾತಕ್ಕೆ ಆಹ್ವಾನ ನೀಡುತ್ತದೆ. ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಬೇಕು. ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿ, ಎಲ್ಲೆಲ್ಲಿ ಸೂಚನಾ ಫಲಕ ಅಳವಡಿಸಬೇಕು ಎಂಬುದನ್ನು ಈಗಾಗಲೇ ಗುರುತಿಸಲಾಗಿದೆ’ ಎಂದುತಿಳಿಸಿದರು.

ಸಂಚಾರಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಜಿತೇಂದ್ರ, ಮಂಜುಳಾ ಹಾಜರಿದ್ದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT