ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ: ನಿವೃತ್ತ 14 ಯೋಧರಿಗೆ ಅದ್ಧೂರಿ ಸ್ವಾಗತ

Published 8 ಜುಲೈ 2024, 14:35 IST
Last Updated 8 ಜುಲೈ 2024, 14:35 IST
ಅಕ್ಷರ ಗಾತ್ರ

ಹಾಸನ: ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ತವರೂರಿಗೆ ಬಂದ 14 ನಿವೃತ್ತ ಯೋಧರಿಗೆ ನಗರದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.

ನಗರದ ಮಹಾರಾಜ ಪಾರ್ಕ್ ಬಳಿ ನಿವೃತ್ತ ಯೋಧರ ಸಮೂಹದ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ನಿವೃತ್ತ ಯೋಧರನ್ನು ಸನ್ಮಾನಿಸಿ, ಬರಮಾಡಿಕೊಂಡರು. ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ, ಡೈರಿ ವೃತ್ತ ಮೂಲಕ ಕೆಂಚಟ್ಟಳ್ಳಿ ನಿವೃತ್ತ ಅರಸೇನಾ ಪಡೆಯ ಕಟ್ಟಡದವರೆಗೂ ಮೆರವಣಿಗೆ ನಡೆಸಲಾಯಿತು. ನೂರಕ್ಕೂ ಹೆಚ್ಚು ಬೈಕ್‌ಗಳೊಂದಿಗೆ ತೆರೆದ ಜೀಪಿನಲ್ಲಿ ಯೋಧರನ್ನು ಕರೆತರಲಾಯಿತು.

ಜಮ್ಮು–ಕಾಶ್ಮೀರ, ಛತ್ತೀಸ್‌ಗಡದಂತಹ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿರುವ ಯೋಧರು, ಹವಾಮಾನ ವೈಪರೀತ್ಯದಲ್ಲೂ ಉಗ್ರರ ಜೊತೆಗೆ ಹೋರಾಡುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಸ್ಮರಿಸಿ, ಸ್ವಾಗತವನ್ನು ನೀಡುವ ಮೂಲಕ ಗೌರವ ಸಲ್ಲಿಸಲಾಗುತ್ತಿದೆ ಎಂದು ನಿವೃತ್ತ ಸೈನಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ.ರಮೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT