ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ₹1.54 ಕೋಟಿ ಆದಾಯ ಸಂಗ್ರಹ

ಹಾಸನಾಂಬೆ ಹುಂಡಿ ಹಣ ಎಣಿಕೆ: ಆದಾಯದಲ್ಲಿ ಏರಿಕೆ
Last Updated 8 ನವೆಂಬರ್ 2021, 16:04 IST
ಅಕ್ಷರ ಗಾತ್ರ

ಹಾಸನ: ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಹುಂಡಿ ಹಣ ಹಾಗೂ ಟಿಕೆಟ್‌ ಮತ್ತಿತರ ಮೂಲಗಳಿಂದ ಒಟ್ಟು ₹1,54,37,940 ಹಣ ಸಂಗ್ರಹವಾಗಿದೆ.

ಹಾಸನಾಂಬೆ ದೇವಾಲಯದ ಹುಂಡಿಗಳಿಂದ ₹83,89,770 ಸಂಗ್ರಹವಾಗಿದ್ದರೆ, ಸಿದ್ದೇಶ್ವರ ದೇವಾಲಯದ ಒಂದು ಹುಂಡಿಯಿಂದ ₹6,50,355 ಕಾಣಿಕೆ ರೂಪದಲ್ಲಿಸಂಗ್ರಹವಾಗಿದೆ. ಅಲ್ಲದೆ, ಟಿಕೆಟ್ ಮಾರಾಟದಿಂದ ₹63,97,815 ಸಂಗ್ರಹವಾಗಿದೆ.

ದೇವಾಲಯದ ಆಡಳಿತಾಧಿಕಾರಿ ಬಿ.ಎ.ಜಗದೀಶ್, ತಹಶೀಲ್ದಾರ್ ನಟೇಶ್ ಸಮ್ಮುಖದಲ್ಲಿ ಸಿ.ಸಿ.ಟಿ.ವಿಕ್ಯಾಮೆರಾ ಕಣ್ಗಾವಲಿನಲ್ಲಿ ಬೆಳಿಗ್ಗೆ 8 ಗಂಟೆಗೆ ಹುಂಡಿ ಹಣ ಎಣಿಕೆ ಕಾರ್ಯ ಆರಂಭವಾಗಿ ಸಂಜೆ 4.30ಕ್ಕೆಮುಕ್ತಾಯಗೊಂಡಿತ್ತು.

ಅ.28ರಿಂದ ನ.6ರವರೆಗೆ ಹಾಸನಾಂಬ, ಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆದಿತ್ತು.ಬ್ಯಾಂಕ್‌ ಸಿಬ್ಬಂದಿ, ಕಂದಾಯ ಇಲಾಖೆ ಹಾಗೂ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು, ದೇವಾಲಯದಆಡಳಿತಾಧಿಕಾರಿ, ತಹಶೀಲ್ದಾರ್‌ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು. ಹುಂಡಿ ಹಣವನ್ನು ಬ್ಯಾಂಕ್‌ಗೆ ಜಮಾಮಾಡಲಾಯಿತು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಆದಾಯದಲ್ಲಿ ಏರಿಕೆಯಾಗಿದೆ. ಕಳೆದ ಬಾರಿ ಕೋವಿಡ್‌ ಕಾರಣಕ್ಕೆ ಸಾರ್ವಜನಿಕ ದರ್ಶನ ನಿಷೇಧ ಮಾಡಲಾಗಿತ್ತು. ಹಾಸನಾಂಬೆ ದೇವಾಲಯದ ಹುಂಡಿಗಳಿಂದ ₹21,34,052 ಹಾಗೂ ಸಿದ್ದೇಶ್ವರ ದೇವಾಲಯದ ಹುಂಡಿಯಿಂದ ₹1,45,720ಸಂಗ್ರಹವಾಗಿತ್ತು.

2013ರಲ್ಲಿ ₹1.21 ಕೋಟಿ, 2014ರಲ್ಲಿ ₹1.27 ಕೋಟಿ, 2015ರಲ್ಲಿ ₹1.46 ಕೋಟಿ,2017ರಲ್ಲಿ ₹4.14 ಕೋಟಿ, 2018ರಲ್ಲಿ ₹2.68 ಕೋಟಿ, 2019ರಲ್ಲಿ ₹3.06 ಕೋಟಿಸಂಗ್ರಹವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT