ಬುಧವಾರ, ಅಕ್ಟೋಬರ್ 20, 2021
24 °C
ಕಟ್ಟೆಮನೆ ಯಜಮಾನರ ಪುಣ್ಯತಿಥಿ ಅಂಗವಾಗಿ ರಕ್ತದಾನ ಶಿಬಿರ

30 ಯುನಿಟ್‌ ರಕ್ತ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರದ ತಣ್ಣೀರುಹಳ್ಳ ಕಲ್ಪತರು ರಸ್ತೆಯ ಕಟ್ಟೆಮನೆ ವಠಾರದ ’ಜಯಸೂರ್ಯ ಅನುಗ್ರಹ’ ನಿಲಯದಲ್ಲಿ ಕಟ್ಟೆಮನೆ ಯಜಮಾನ ಎಚ್.ಪಿ.ಶಿವರುದ್ರಯ್ಯ, ಎಚ್.ಪಿ.ನಾರಾಯಣ ಹಾಗೂ ಸಿದ್ದಲಿಂಗಪ್ಪ ಪುಣ್ಯತಿಥಿ ಅಂಗವಾಗಿ ಭಾನುವಾರ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಹಾಸನದ ಜೀವರಕ್ಷಾ ನಿಧಿಯ ಟೆಕ್ನಿಕಲ್ ಸೂಪರ್‌ವೈಸರ್ ಮೋಹನ್ ಇವರ ಸಹಯೋಗದಲ್ಲಿ ನಡೆದ ಶಿಬಿರವನ್ನು ಭಾರತ ಮಾತೆ ಫೋಟೋಗೆ ಅರ್ಚನೆ ಮಾಡುವ ಮೂಲಕ ನಗರದ ಸಂತ ಫಿಲೋಮಿನಾ ಕಾಲೇಜಿನ ಮನೋವಿಜ್ಞಾನ ಶಾಸ್ತ್ರದ ಉಪನ್ಯಾಸಕ ಎನ್.ಆರ್. ಪ್ರಶಾಂತ್ ಉದ್ಘಾಟಿಸಿದರು.

ಶಿಬಿರದಲ್ಲಿ 30ಕ್ಕೂ ಹೆಚ್ಚು ಜನ ಕಟ್ಟೆಮನೆ ಸದಸ್ಯರು ಹಾಗೂ ಸ್ನೇಹಿತರು ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಸದಸ್ಯರಿಗೆ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಹಾಗೂ ಕಾಲೇಜಿನ ಉಪನ್ಯಾಸಕ ದಂಪತಿ ಡಾ.ಗೋವಿಂದ ಶರ್ಮ ಹಾಗೂ ಡಾ.ಅನುರಾಧ ಪ್ರಶಸ್ತಿ ಪತ್ರ ವಿತರಣೆ ಮಾಡಿದರು.

ಶಿಬಿರದಲ್ಲಿ ಕಟ್ಟೆಮನೆ ಸದಸ್ಯರು ಜ್ಞಾನೇಶ್ವರ, ಲಕ್ಷ್ಮೀಕಾಂತ, ನಾಗೇಂದ್ರ ಕಟ್ಟೆಮನೆ, ಮೋಹನ್ ಕುಮಾರ್, ದಿಲೀಪ್ ಕುಮಾರ್, ರಾಕೇಶ್, ಸಂಜಯ್, ವರುಣ್, ಕಾರ್ತಿಕ್, ಶಿವಸ್ವಾಮಿ, ಚರಣ್ ಹಾಗೂ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು