ಗುರುವಾರ , ಜನವರಿ 27, 2022
27 °C

ಅರಸೀಕೆರೆ: ಏಳು ಜನ ಜೂಜುಕೋರರ ಬಂಧನ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ (ವಿಜಯನಗರ ಜಿಲ್ಲೆ): ಹೋಬಳಿಯ ಉ.ಬೇವಿನಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನ ಎದುರು ಇಸ್ಪೀಟ್ ಆಡುತ್ತಿದ್ದ ಏಳು ಜನರನ್ನು ಅರಸೀಕೆರೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಉ.ಬೇವಿನಹಳ್ಳಿ ಗ್ರಾಮದ ಎಸ್. ಭರತ್ (22), ಎನ್.ಕೆಂಚನಗೌಡ (50), ದಾವಣಗೆರೆ ತಾಲ್ಲೂಕಿನ ಆಲೂರು ಗ್ರಾಮದ ಡಿ.ಎನ್ ಪರಶುರಾಮ (32), ಎಂ. ನಾಗರಾಜ (25), ಎಚ್. ಹನುಮಂತಪ್ಪ (29) ಹರಿಹರ ತಾಲ್ಲೂಕಿನ ಆದಾಪುರ ಗ್ರಾಮದ ಡಿ. ವೀರಭದ್ರಪ್ಪ (40), ಕೆ.ಪಿ ಶಿವರಾಮ (35) ಬಂಧಿತರು. ಬಂಧಿತರಿಂದ ₹1,03,210 ನಗದು, ಎರಡು ಬೈಕ್, ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಅರಸೀಕೆರೆ ಸಬ್ ಇನ್‌ಸ್ಪೆಕ್ಟರ್‌ ಕೆ.ನಾಗರತ್ನ, ಎಎಸ್ಐ ಸುಬ್ಬಣ್ಣ, ಕಾನ್‌ಸ್ಟೆಬಲ್‌ಗಳಾದ ಚಿದಾನಂದಪ್ಪ, ಎಚ್.ಎಂ ನಟರಾಜ್, ರವೀಂದ್ರ, ಗುರುಪ್ರಸಾದ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು