ಲೋಕಸಭಾ ಚುನಾವಣೆ ವೆಚ್ಚ: ಅಭ್ಯರ್ಥಿಗಳ ಲೆಕ್ಕ ಪರಿಶೀಲನೆ

ಗುರುವಾರ , ಜೂಲೈ 18, 2019
22 °C

ಲೋಕಸಭಾ ಚುನಾವಣೆ ವೆಚ್ಚ: ಅಭ್ಯರ್ಥಿಗಳ ಲೆಕ್ಕ ಪರಿಶೀಲನೆ

Published:
Updated:
Prajavani

ಹಾಸನ: ಲೋಕಸಭಾ ಚುನಾವಣೆ ವೆಚ್ಚಗಳಿಗೆ ಸಂಬಂಧಿಸಿದಂತೆ ಅಂತಿಮ ಹಂತದ ಲೆಕ್ಕ ಪರಿಶೀಲನಾ ಕಾರ್ಯ ನಡೆಯಿತು.

ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟಿರುವ ವೆಚ್ಚ ವೀಕ್ಷಕರಾದ ವಿವೇಕ್ ಗುಪ್ತ ಹಾಗೂ ರಾಜೀವ್ ಮಾಗೋ ಅವರ ಸಮ್ಮುಖದಲ್ಲಿ ಲೆಕ್ಕ ಪರಿಶೀಲನೆ ಮಾಡಲಾಯಿತು.

ಅಭ್ಯರ್ಥಿಗಳು, ಏಜೆಂಟ್‍ಗಳು ಚುನಾವಣಾ ವೆಚ್ಚಗಳ ವಿವರ ಒದಗಿಸಿದರು. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಅಂತಿಮಗೊಳಿಸಲಾಯಿತು.

ಅಕ್ರಂ ಪಾಷಾ ಮಾತನಾಡಿ, ಲೋಕಸಭಾ ಚುನಾವಣೆಯು ಯಾವುದೇ ತೊಂದರೆಗಳಿಲ್ಲದೆ ಹಾಗೂ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ನಡೆದಿದ್ದು, ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ, ಚುನಾವಣಾ ವೆಚ್ಚ ವೀಕ್ಷಕರ ನೋಡಲ್ ಅಧಿಕಾರಿ ಶ್ರೀನಿವಾಸ ಗೌಡ, ಅಭ್ಯರ್ಥಿಗಳ ಏಜೆಂಟರ್‌ಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !