ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು | ಆಕಸ್ಮಿಕ ಬೆಂಕಿ: ಐದು ಬೈಕ್‌ ಭಸ್ಮ

Last Updated 7 ಮಾರ್ಚ್ 2021, 16:54 IST
ಅಕ್ಷರ ಗಾತ್ರ

ಹಳೇಬೀಡು: ಆಕಸ್ಮಿಕ ಬೆಂಕಿ ಅನಾಹುತದಿಂದ ಐದು ದ್ವಿಚಕ್ರ ವಾಹನಗಳು ಸುಟ್ಟು ಹೋಗಿದ್ದು, ನಿರ್ಮಾಣ ಹಂತದ ಮನೆಯ ಕಿಟಕಿ ಹಾಗೂ ಟೈಲ್ಸ್ ಕಿತ್ತು ಹೋಗಿರುವ ಘಟನೆ ಅಡಗೂರು ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ನಿರ್ಮಾಣ ಹಂತದಲ್ಲಿರುವ ಅನುಸೂಯಾ ರಂಗಸ್ವಾಮಿ ಅವರ ಮನೆಯ ಜಗುಲಿಯಲ್ಲಿ ಬೈಕ್‌ಗಳನ್ನು ನಿಲ್ಲಿಸಿ ಭದ್ರಾವತಿಯಲ್ಲಿ ವಿವಾಹ ಮಹೋತ್ಸವಕ್ಕೆ ಎಲ್ಲರೂ ವ್ಯಾನ್‌ನಲ್ಲಿ ತೆರಳಿದ್ದರು. ಸಮಾರಂಭ ಮುಗಿಸಿ ವಾಪಸ್‌ ಬರುವಷ್ಟರಲ್ಲಿ ಬೇಲೂರಿನ ಮಹಾಲಿಂಗಪ್ಪ, ದುದ್ದ ಗ್ರಾಮದ ವಸಂತ ಕುಮಾರ್, ಹಗರ ಗ್ರಾಮದ ಪ್ರಕಾಶ್, ಶಿವಣ್ಣ ಹಾಗೂ ಹಿರೀಸಾವೆಯ ದರ್ಶನ್ ಅವರ ಬೈಕ್‌ಗಳು ಸುಟ್ಟುಹೋಗಿವೆ.

ಬೆಂಕಿಯ ಜ್ವಾಲೆಗೆಮನೆಯ ಎರಡು ಕಿಟಕಿ ಗಾಜುಗಳು ಸಿಡಿದಿದ್ದು, ಮರದ ಚೌಕಟ್ಟುಗಳು ಸುಟ್ಟು ಹೋಗಿವೆ. ಮನೆ ಪಕ್ಕದಲ್ಲಿ ಒಣಗಲು ಹಾಕಿದ್ದ ಬಟ್ಟೆಗಳು ಹಾಗೂ ಮೂರು ಸೈಕಲ್‌ ಕೂಡಾ ಭಸ್ಮವಾಗಿದೆ. ಬೈಕ್‌ ಹಾಗೂ ಮನೆಯಲ್ಲಿದ್ದ ವಸ್ತು ಸೇರಿ ₹ 8ಲಕ್ಷ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.

ದಟ್ಟ ಹೊಗೆ ಬರುವುದನ್ನು ಗಮನಿಸಿ ಅಕ್ಕಪಕ್ಕದ ನಿವಾಸಿಗಳು,ನೀರು ತಂದು ಬೆಂಕಿ ನಂದಿಸಿದರು.

ಪಿಎಸ್ಐ ಗಿರಿಧರ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.

ಅತ್ಯಾಚಾರ:ಆರೋಪಿ ಬಂಧನ
ಹಾಸನ:
ಐದು ವರ್ಷ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಮಂಗಳೂರು ಮೂಲದ ವ್ಯಕ್ತಿ ಬಂಧಿತ ಆರೋಪಿ. ಈತ ಎರಡು ವರ್ಷಗಳಿಂದ ಗ್ರಾಮವೊಂದರ ಹೋಟೆಲ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಮೊಬೈಲ್‌ನಲ್ಲಿ ಚಿತ್ರಿಸಿ ವಿಕೃತಿ ಮೆರೆದಿದ್ದನು. ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತ ಬಾಲಕಿಗೆ ಹಿಮ್ಸ್‌ನ ನಿರ್ಭಯಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT