ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಜನೇಯಸ್ವಾಮಿ ಮೂರ್ತಿ ಉದ್ಘಾಟನೆ: ಯಾತ್ರಾ ಸ್ಥಳವಾಗಿ ಮಾರ್ಪಡು: ಸಿಮೆಂಟ್ ಮಂಜು

Published 27 ಮೇ 2024, 13:28 IST
Last Updated 27 ಮೇ 2024, 13:28 IST
ಅಕ್ಷರ ಗಾತ್ರ

ಆಲೂರು: ‘ವಿಜಯ ಆಂಜನೇಯಸ್ವಾಮಿ ಮೂರ್ತಿ ಸುಮಾರು 18 ಅಡಿ ಎತ್ತರವಿದ್ದು, ಪ್ರತಿಷ್ಠಾಪನೆಯಾಗಿರುವ ಸ್ಥಳವನ್ನು ಯಾತ್ರಿಕರ ಸ್ಥಳವನ್ನಾಗಿ ಮಾರ್ಪಾಡು ಮಾಡಲು ಶ್ರಮಿಸುವುದಾಗಿ’ ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಕಸಬಾ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಬೈರಾಪುರ, ಸೊಪ್ಪಿನಹಳ್ಳಿ, ಮಣಿಪುರ ಗ್ರಾಮಸ್ಥರ ಸಹಯೋಗದಲ್ಲಿ, ದಾನಿಗಳು ಹಾಗೂ ಸರ್ಕಾರದ ಅನುದಾನದಲ್ಲಿ, ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದ ದೇವರಕೆರೆಯಲ್ಲಿ ನಿರ್ಮಿಸಿರುವ 18 ಅಡಿ ಎತ್ತರದ ವಿಜಯ ಆಂಜನೇಯಸ್ವಾಮಿ ಭವ್ಯ ಮೂರ್ತಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ದೇವರಕೆರೆ ಅಂಗಳದಲ್ಲಿ ನಿರ್ಮಾಣವಾಗಿರುವ ವಿಜಯ ಆಂಜನೇಯಸ್ವಾಮಿ ಮೂರ್ತಿ ನಿಂತಿರುವ ಸ್ಥಳದ ಮೂರು ಭಾಗದಲ್ಲಿ ನೀರು ಆವರಿಸಿದ್ದು, ಅಮೋಘವಾಗಿ ಮೂಡಿ ಬಂದಿದೆ. ಗ್ರಾಮಸ್ಥರು, ಸಾರ್ವಜನಿಕರು ಮತ್ತು ಯುವಜನರು ಈ ಕಾರ್ಯಕ್ರಮದ ಯಶಸ್ಸಿಗೆ ಹಗಲಿರುಳು ಶ್ರಮಿಸಿದ್ದಾರೆ. ಈ ಕ್ಷೇತ್ರವನ್ನು ಯಾತ್ರಾ ಸ್ಥಳವಾಗಿ ರೂಪಿಸುವ ಸಂಕಲ್ಪ ಎಲ್ಲರೂ ಸೇರಿ ಮಾಡೋಣ’ ಎಂದರು.

ಭಾನುವಾರ ಮುಂಜಾನೆಯಿಂದಲೇ ಬ್ರಾಹ್ಮಿ ಮುಹೂರ್ತದಲ್ಲಿ ಬೆಂಗಳೂರು ಇಸ್ಕಾನ್ ದೇವಾಲಯದ ವೈಕುಂಠ ಗೌರವದಾಸ್ ಅವರು, ಪೂಜಾ ವಿಧಿ ವಿಧಾನಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ನಂತರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಉದ್ಘಾಟನೆಗೊಂಡಿತು.

ಮಾಜಿ ಶಾಸಕರಾದ ಎಚ್.ಎಂ.ವಿಶ್ವನಾಥ್, ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್. ಮಂಜೇಗೌಡ, ಗ್ರಾಪಂ ಅಧ್ಯಕ್ಷ ಹೇಮಾ ಮಂಜೇಗೌಡ, ಮುಖಂಡರಾದ ಜೈ ಮಾರುತಿ ದೇವರಾಜ್, ಬಿ.ಸಿಶಂಕರಾಚಾರ್, ಎಸ್.ದೇವರಾಜ್, ಲೋಕೇಶ್ ಕಣಗಾಲು, ಗ್ರಾ.ಪಂ ಮಾಜಿ ಅದ್ಯಕ್ಷ ಸಿ.ಡಿ.ಅಶೋಕ್, ವೀರಭದ್ರಸ್ವಾಮಿ, ಗಣೇಶ್ ಧರ್ಮಪುರಿ, ಮಲ್ಲೇಶ್, ನಂದೀಶ್‍ಗೌಡ, ಮಂಜೇಗೌಡ, ಎಂ.ಬಾಲಕೃಷ್ಣ, ಕೃಷ್ಣೇಗೌಡ, ನಂಜುಂಡೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT