ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರಸೀಕೆರೆ: ದೀಪಾವಳಿ ಖರೀದಿ ಜೋರು

Published 13 ನವೆಂಬರ್ 2023, 15:27 IST
Last Updated 13 ನವೆಂಬರ್ 2023, 15:27 IST
ಅಕ್ಷರ ಗಾತ್ರ

ಅರಸೀಕೆರೆ: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಜನರು ನಗರದ ಮಾರುಕಟ್ಟೆಯಲ್ಲಿ ಹೂ, ಹಣ್ಣು, ಬಾಳೆಕಂದು, ಮಾವಿನಸೊಪ್ಪು, ತರಕಾರಿ, ಪೂಜೆ ಸಾಮಗ್ರಿಗಳನ್ನು ಖರೀದಿಸುವಲ್ಲಿ ಮಗ್ನರಾಗಿದ್ದರು.

ಮಳೆ ಸಕಾಲಕ್ಕೆ ಬರದೇ ರೈತರು ನಷ್ಟ ಅನುಭವಿಸಿದ್ದು, ಬರಗಾಲದ ಛಾಯೆ ಆವರಿಸಿದೆ. ಸಂಪ್ರದಾಯದ ಪ್ರಕಾರ ಹಬ್ಬ ಆಚರಿಸಬೇಕಾಗಿದ್ದು, ಸಾರ್ವಜನಿಕ ಗ್ರಂಥಾಲಯ ರಸ್ತೆಯಲ್ಲಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನ ಖರೀದಿಯಲ್ಲಿ ನಿರತರಾಗಿದ್ದರು.

ಸೇವಂತಿಗೆ ಹೂ ಮಾರಿಗೆ ₹ 60 ರಿಂದ ₹ 80, ಕನಕಾಂಬರ ₹100 ರಿಂದ ₹ 120, ಕಾಕಡ ₹80 ರಿಂದ ₹100, ಬಾಳೆಹಣ್ಣು ಕೆ.ಜಿ.ಗೆ ₹120, ಸೇಬು ಕೆ.ಜಿ.ಗೆ ₹120 ರಿಂದ ₹150, ಕಿತ್ತಲೆ ₹80, ದಾಳಿಂಬೆ ₹ 120 ರಿಂದ ₹150, ಬಾಳೆಕಂದು ಹಾಗೂ ಮಾವಿನಸೊಪ್ಪು ಇತ್ಯಾದಿಗಳ ಬೆಲೆ ಹೆಚ್ಚಿದ್ದರೂ ಸಾಮಾನ್ಯ ಜನರು ಚೌಕಾಸಿ ಮಾಡಿಕೊಂಡು ವಸ್ತುಗಳನ್ನು ಖರೀದಿಸಿದರು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಅಷ್ಟು ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಏರಿಕೆ ಆಗದಿರುವುದು ಜನ ಸಾಮಾನ್ಯರ ಪಾಲಿಗೆ ತೃಪ್ತಿ ತಂದಿದೆ.

ನಗರದ ಹಳೆಯ ಮಾಧ್ಯಮಿಕ ಶಾಲೆ ಆವರಣದಲ್ಲಿ ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, 7 ಅಂಗಡಿಗಳಲ್ಲಿ ಮಾತ್ರ ಪರಿಸರ ಸ್ನೇಹಿ ಪಟಾಕಿ ಮಾರಾಟವಾಗುತ್ತಿವೆ. ನಾಗರಿಕರು ಪಟಾಕಿ ಖರೀದಿಗೆ ಮುಂದಾಗಿದ್ದಾರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವ್ಯಾಪಾರದಲ್ಲಿ ಜನರು ನಿರಾಸಕ್ತಿ ತೋರಿದ್ದಾರೆ ಎಂದು ವ್ಯಾಪಾರಸ್ಥರು ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT