ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರ ಬಂಧನ: 14 ದ್ವಿಚಕ್ರ ವಾಹನ ವಶ

ಸುಲಭವಾಗಿ ಸ್ಟಾರ್ಟ್‌ ಆಗುವ ಕಾರಣಕ್ಕೆ ಹಳೆ ವಾಹನಗಳ ಕಳವು,
Last Updated 3 ಸೆಪ್ಟೆಂಬರ್ 2021, 13:32 IST
ಅಕ್ಷರ ಗಾತ್ರ

ಹಾಸನ: ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವುಮಾಡಿದ್ದ ಇಬ್ಬರುಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಲ್ಲಾಭಾಯ್ ರಸ್ತೆ ನಿವಾಸಿ ಜಗದೀಶ್ ಮತ್ತು ಅರಕಲಗೂಡು ತಾಲ್ಲೂಕು ಕೇರಳಾಪುರದರಂಗಸ್ವಾಮಿಯನ್ನು ಬಂಧಿಸಿ, ಅಂದಾಜು ₹3.5 ಲಕ್ಷ ಮೌಲ್ಯದ ವಿವಿಧ ಕಂಪನಿಯ ಹದಿನಾಲ್ಕು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಆರ್.ಶ್ರೀನಿವಾಸ್‌ ಗೌಡ ತಿಳಿಸಿದರು.

ಆ. 24ರಂದು ದೊಡ್ಡಕೊಂಡಗುಳ ಗ್ರಾಮದ ಅಶೋಕ ಎಂಬುವರ ಬೈಕ್ ಜಿಲ್ಲಾಸ್ಪತ್ರೆ ಆವರಣದಲ್ಲಿ ಕಳುವಾಗಿತ್ತು. ಈ ಸಂಬಂಧ ನಗರ ಠಾಣೆಗೆ ದೂರು ನೀಡಿದ್ದರು. ವಾರದ ಅಂತರದಲ್ಲಿ ಐದಾರು ದ್ವಿಚಕ್ರವಾಹನಗಳು ಕಳ್ಳತನವಾಗಿದ್ದನ್ನು ಪರಿಗಣಿಸಿ ನಗರ ವೃತ್ತದ ಸಿಪಿಐ ಎಸ್.ರೇಣುಕಾಪ್ರಸಾದ್ ಹಾಗೂಪೊಲೀಸ್‌ ಸಬ್ ಇನ್‌ಸ್ಪೆಕ್ಟರ್‌ ಅಭಿಜಿತ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.ಈ ತಂಡ ನಗರದಬಿಟ್ಟಗೌಡನಹಳ್ಳಿ ಸರ್ಕಲ್ ಬಳಿ ಸೆ.2ರಂದು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ವೇಳೆಬೈಕ್ ಕಳ್ಳತನ ಮಾಡಿರುವ ಬಗ್ಗೆ ಬಂಧಿತರು ಬಾಯ್ಬಿಟ್ಟಿದ್ದಾರೆ ಎಂದು ಎಸ್ಪಿ ತಿಳಿಸಿದರು.

ಹಾಸನ ನಗರ ಠಾಣೆ ವ್ಯಾಪ್ತಿಯ 5, ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯ 3, ಬಡಾವಣೆ ಮತ್ತು ಹೊಳೆನರಸೀಪುರ ನಗರಠಾಣೆಯ ತಲಾ 2 ಹಾಗೂ ಪೆನ್ಷೆನ್‌ ಮೊಹಲ್ಲಾ, ಅರಕಲಗೂಡು ಠಾಣೆಯ 1ಪ್ರಕರಣ ಪತ್ತೆಯಾಗಿದೆ.
ಆರೋಪಿಗಳಿಂದ 8 ಹೀರೋ ಹೊಂಡಾ ಸ್ಪ್ಲೆಂಡರ್‌, ತಲಾ ಒಂದೊಂದುಪಲ್ಸರ್, ಬಜಾಜ್ ಡಿಸ್ಕವರ್, ಟಿವಿಎಸ್ ಎಕ್ಸಲ್, ವಿಕ್ಟರ್, ಹೀರೋ ಹೊಂಡಾ ಫ್ಯಾಶನ್ ಪ್ರೋ ಹಾಗೂಫ್ಯಾಶನ್ ಪ್ಲಸ್ ಬೈಕ್ ವಶಪಡಿಸಿಕೊಂಡು ಸಂಬಂಧಪಟ್ಟ ಮಾಲೀಕರಿಗೆ ಹಿಂದಿರುಗಿಸಲಾಗಿದೆ ಎಂದುಮಾಹಿತಿ ನೀಡಿದರು.

ಹಿಂದೆ ಜಿಲ್ಲೆಯಲ್ಲಿ ಮಾರುತಿ ಓಮಿನಿ ಕಾರುಗಳನ್ನು ಕಳವು ಮಾಡಲಾಗುತ್ತಿತ್ತು. ಅದಾದ ಬಳಿಕ ಬುಲೆಟ್ ಹಾಗೂ ಐಷಾರಾಮಿ ಬೈಕ್ ಮಾಯವಾಗುತ್ತಿದ್ದವು. ಹಳೇಬೀಡು ಪೊಲೀಸರು ಅಶೋಕ್ಲೇಲ್ಯಾಂಡ್ ಕಳವು ಜಾಲವನ್ನು ಪತ್ತೆ ಹಚ್ಚಿತ್ತು. ಇದೀಗ ಸುಲಭವಾಗಿ ಸ್ಟಾರ್ಟ್ ಮಾಡಬಹುದುಎಂಬ ಕಾರಣದಿಂದ ಹಳೇ ಬೈಕ್‌ಗಳನ್ನೇ ಕಳುವು ಮಾಡುತ್ತಿದ್ದ ತಂಡ ಸಿಕ್ಕಿ ಬಿದ್ದಿದೆ ಎಂದು ಎಸ್ಪಿವಿವರಿಸಿದರು.

ಆಲೂರು ತಾಲ್ಲೂಕಿನ ನಂದಿ ಪುರ ರೇವ್ ಪಾರ್ಟಿ ಸಂಬಂಧ 132 ಮಂದಿಯ ರಕ್ತದ ಮಾದರಿಗಳನ್ನುಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಇನ್ನೂ ಬಂದಿಲ್ಲ. ಪ್ರಕರಣ ಸ್ಥಳದಲ್ಲಿ ವಶಪಡಿಸಿಕೊಂಡ ಗಾಂಜಾ ಸೇರಿದಂತೆ ಇತರ ಮಾದಕ ವಸ್ತುಗಳ ಬಗ್ಗೆ ಪರಿಶೀಲನೆನಡೆಸಲಾಗಿದೆ ಎಂದರು.

ನಗರ ಪ್ರದೇಶದಲ್ಲಿ ಹೆಚ್ಚು ಕಳ್ಳತನ ಪ್ರಕರಣ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ಅವಧಿ ಮುಗಿದ ನಂತರ ದಂಡ ವಿಧಿಸಲಾಗುತ್ತಿದೆ. ಸಿಸಿ ಕ್ಯಾಮೆರಾ ಅಳವಡಿಸದಿದ್ದರೆ ₹5 ರಿಂದ ₹10ಸಾವಿರದವರೆಗೆ ದಂಡ ವಿಧಿಸುವ ಅವಕಾಶ ಇದೆ ಎಂದು ಎಸ್ಪಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT