ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರಮಿಕ ವರ್ಗದ ಮೇಲೆ ನಿಲ್ಲದ ದೌರ್ಜನ್ಯ’

‘ಸೌಹಾರ್ದ ಮೇ ದಿನಾಚರಣೆ’ಯಲ್ಲಿ ಸಿಐಟಿಯು ಕಾರ್ಯದರ್ಶಿ ಧರ್ಮೇಶ್ ಆರೋಪ
Last Updated 1 ಮೇ 2022, 15:51 IST
ಅಕ್ಷರ ಗಾತ್ರ

ಹಾಸನ: ದುಡಿಯುವ ವರ್ಗದ ಮೇಲೆ ನಿರಂತರವಾಗಿ ದೌರ್ಜನ್ಯಗಳುನಡೆಯುತ್ತಿದ್ದು, ಐಕ್ಯತೆಗೆ ಧಕ್ಕೆ ತರುವಂತ ಜಾತಿವಾದ ಬಿತ್ತುವ ವ್ಯವಸ್ಥಿತಕೆಲಸಗಳು ಆಗುತ್ತಿವೆ ಎಂದು ಸಿಐಟಿಯು ಕಾರ್ಯದರ್ಶಿ ಧರ್ಮೇಶ್ ಆರೋಪಿಸಿದರು.

‘ಸೌಹಾರ್ದ ಮೇ ದಿನಾಚರಣೆ’ ಪ್ರಯುಕ್ತ ಸಿಐಟಿಯು ನೇತೃತ್ವದಲ್ಲಿಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಗಳು ಬೆಲೆ ಏರಿಕೆ ಬಗ್ಗೆ ಮಾತನಾಡದಂತೆ ಕೋಮುವಾದ ಮುನ್ನೆಲೆಗೆ ತಂದು ದಿಕ್ಕು ತಪ್ಪಿಸುತ್ತಿದೆ. ಶ್ರಮಿಕ ವರ್ಗದವರ ಮೇಲೆ ನಿರಂತರವಾಗಿ ದೌರ್ಜನ್ಯಗಳು ಹೆಚ್ಚುತ್ತಿದ್ದು, ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ದೂರಿದರು.

ದಲಿತ ಮುಖಂಡ ರಾಜಶೇಖರ್ ಹುಲಿಕಲ್ಲು ಮಾತನಾಡಿ, ದೇಶದಸಂವಿಧಾನ ಅಪಾಯದಲ್ಲಿ ಸಿಲುಕಿದೆ. ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ದೂರಿದರು.

ಕಾರ್ಯಕ್ರಮಕ್ಕೂ ಮುನ್ನ ಎನ್.ಆರ್.ವೃತ್ತದಿಂದ ಸಾಹಿತ್ಯ ಪರಿಷತ್ ಭವನದರೆಗೆ ಕಾರ್ಮಿಕರು ಮೆರವಣಿಗೆ ನಡೆಸಿದರು. ಭವನದ ಆವರಣದಲ್ಲಿರುವ ಕುವೆಂಪು, ಬುದ್ಧ, ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕ ಮುಖಂಡ ಜಿ.ಪಿ.ಸತ್ಯನಾರಾಯಣ್,ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪುಷ್ಪಾ, ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ,ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್ ಕುಮಾರ್,
ಅರವಿಂದ್, ಪತ್ರಕರ್ತ ವೆಂಟೇಶ್‌ ಇದ್ದರು.

‘ಕಾರ್ಮಿಕರಿಗೆ ಸರ್ ಎಂ.ವಿ ಆಶಾಕಿರಣ’

ಆಲೂರು: ‘ಸರ್ ಎಂ. ವಿಶ್ವೇಶ್ವರಯ್ಯ ಅವರು ಕಾರ್ಮಿಕರ ಪಾಲಿಗೆ ಆಶಾಕಿರಣ’ ಎಂದು ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಟಿ. ರಾಮೇಗೌಡ ತಿಳಿಸಿದರು.

ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ ಕಟ್ಟಡ ಕಾರ್ಮಿಕರ ಸಂಘದತಾಲ್ಲೂಕು ಘಟಕದ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಮಿಕರ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ವಿ‘ಶ್ವೇಶ್ವರಯ್ಯರವರು ನಿರ್ಮಾಣ ಮಾಡಿರುವ ಕೃಷ್ಣರಾಜ ಸಾಗರ ಅಣೆಕಟ್ಟು ಇತಿಹಾಸ ನಿರ್ಮಿಸಿದೆ. ಇವರು ಅಣೆಕಟ್ಟು ನಿರ್ಮಾಣ ಮಾಡುವ ಸಂದರ್ಭದಲ್ಲಿ ಕಾಮಗಾರಿಯಲ್ಲಿ ಅನುಸರಿಸಿರುವ ಗುಣಮಟ್ಟ ಸಾಕ್ಷಿಯಾಗಿದೆ. ಆದ್ದರಿಂದ ಪ್ರತಿ ಕಟ್ಟಡ ಕಾರ್ಮಿಕರು ತಮ್ಮ ವೃತ್ತಿ ಜೀವನದಲ್ಲಿ ಗುಣಮಟ್ಟದ ಕೆಲಸ ಮಾಡಲು ತಮ್ಮೊಂದಿಗೆ ಇನ್ನೊಬ್ಬರನ್ನು ಪ್ರೋತ್ಸಾಹಿಸಬೇಕು. ತಾವು ಮಾಡಿದ ಕಟ್ಟಡ ಕೆಲಸಗಳು ಚಿರಾಯುವಾಗಿ ಉಳಿಯುವಂತಾಗಬೇಕು’ ಎಂದರು.

ಎಂಜಿನಿಯರ್ ಎ.ಎಚ್. ಲಕ್ಷ್ಮಣ್ ಮಾತನಾಡಿ, ‘ಸರ್ಕಾರ ಯಾವುದೇ ಯೋಜನೆ ರೂಪಿಸುವ ಮೊದಲು ಭವಿಷ್ಯದ ಎಡರು ತೊಡರುಗಳನ್ನು ಅರಿತು ಯೋಜನೆ ರೂಪಿಸಬೇಕು. ವೃತ್ತಿಯಲ್ಲಿ ಸದಾ ಸ್ವಾಮಿ ವಿವೇಕಾನಂದ ಅವರ ತತ್ವಾದರ್ಶಗಳನ್ನು ಪಾಲಿಸಬೇಕು’ ಎಂದರು.

ಸಮಾರಂಭದಲ್ಲಿ ತಾಲ್ಲೂಕು ಸಂಘದ ಅಧ್ಯಕ್ಷ ಟಿ.ಆರ್. ಆನಂದ್, ದೀಪಕ್ ಇತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಕಚೇರಿ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT