ಬಸ್ ನಿಲ್ದಾಣದ ಸೆಪ್ಟಿಕ್ ಟ್ಯಾಂಕ್‌ನಿಂದ ಕೊಳಚೆ ನೀರು ಹರಿಯುವ ಜಾಗವನ್ನು ತಾತ್ಕಾಲಿಕವಾಗಿ ಮುಚ್ಚಿರುವುದನ್ನು ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ತೋರಿಸಿದರು.
ಸೆಪ್ಟಿಕ್ ಟ್ಯಾಂಕ್ ನೀರಿನಿಂದ ಈ ಪ್ರದೇಶದಲ್ಲಿ ದುರ್ವಾಸನೆ ಹರಡುತ್ತಿದ್ದು ಸೊಳ್ಳೆಗಳ ಉತ್ಪತ್ತಿಯಾಗಿ ರೋಗ ರುಜಿನಗಳು ಉಂಟಾಗುತ್ತವೆ. ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸ್ಥಳೀಯರು ಪ್ರತಿಭಟನೆ ಮಾಡಲು ಸಿದ್ಧರಾಗಿದ್ದಾರೆ.
ಹರೀಶ್ ನಾಜರೆ ಆಲೂರು ಪ.ಪಂ. ಸದಸ್ಯ
ಸೆಪ್ಟಿಕ್ ಟ್ಯಾಂಕ್‌ನಿಂದ ನೀರು ಹೊರ ಹೋಗುವ ಸ್ಥಳ ಪರಿಶೀಲಿಸಲಾಗಿದೆ. ಕೂಡಲೇ ನೀರು ಸರಾಗವಾಗಿ ಚರಂಡಿಗೆ ಹರಿಯುವಂತೆ ಮಾಡಿ ಸ್ಲ್ಯಾಬ್ ಅಳವಡಿಸಲಾಗುವುದು. ಗಿಡಗಂಟೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಯಾದವ್ ಸಾರಿಗೆ ಇಲಾಖೆ ಎಂಜಿನಿಯರ್
ಕೊಳಚೆ ನೀರು ಮನೆ ಮುಂದೆ ಹರಿಯುತ್ತಿದ್ದು ಚರಂಡಿ ಮೇಲೆ ಸ್ಲ್ಯಾಬ್ ಹಾಕಲಾಗಿತ್ತು. ಸ್ಲ್ಯಾಬ್ ತುಂಡಾಗಿದ್ದು ದುರ್ವಾಸನೆ ತಡೆಯದಾಗಿದೆ. ಸದ್ಯಕ್ಕೆ ನೀರು ಬರುವ ಕೊಳವೆ ಮುಚ್ಚಿದ್ದೇವೆ. ಸ್ಲ್ಯಾಬ್ ಹಾಕಿ ಕೊಳವೆ ಬಾಯಿ ತೆರೆಯಲಿ.