ಆಲೂರು: ಕೆಂಚಮ್ಮನ ಹೊಸಕೋಟೆ ಹೋಬಳಿ ಮಠದ ಕೊಪ್ಪಲು ಗ್ರಾಮದ ಬಳಿ ಕಾಡಾನೆಯೊಂದು ರಸ್ತೆ ದಾಟುವ ಸಂದರ್ಭದಲ್ಲಿ ಬೈಕಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಶನಿವಾರ ಸಂಜೆ ನಡೆದಿದೆ.

ರಸ್ತೆಯಲ್ಲಿ ನಡೆದು ಬರುತ್ತಿದ್ದ ಜನರು ಒಂಟಿ ಸಲಗ ಕಾಫಿ ತೋಟದಿಂದ ಬರುವುದನ್ನು ಗಮನಿಸಿ ವಿಡಿಯೊ ಮಾಡುತ್ತಿದ್ದರು. ಏನೂ ಅರಿಯದ ವ್ಯಕ್ತಿ ಎದುರಿನಿಂದ ಬೈಕಿನಲ್ಲಿ ಬರುವುದನ್ನು ಕಂಡು ಕೂಗಾಡಿದರು.

ಆನೆ ತೋಟದಿಂದ ದಾಟಿ ರಸ್ತೆಗೆ ದಾಪುಗಾಲು ಇಡುವ ವೇಳೆಗೆ ಆನೆ ಮುಂದೆಯೇ ಬೈಕ್ ಹಾದು ಹೋದರೂ, ಆನೆ ಸುಮ್ಮನೆ ರಸ್ತೆ ದಾಟಿತು. ಬೈಕ್ ಸವಾರ ಹಾರೋಹಳ್ಳಿ ಸಂತೋಷ್ ಪ್ರಾಣಾಪಾಯದಿಂದ ಪಾರಾದನು. ಆನೆ ಸೊಂಡಿಲು ಚಾಚಿದ್ದರೂ ಯುವಕ ಬಲಿಯಾಗುತ್ತಿದ್ದನು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

‘ಭೀಮ ಎಂದೆ ಹೆಸರಿಸಲ್ಪಡುವ ಒಂಟಿ ಸಲಗ ಆನೆಯು ಈವರೆಗೂ ಗ್ರಾಮದೊಳಗೆ ಪ್ರವೇಶಿಸಿದರೂ ಯಾರಿಗೂ ಅಪಾಯ ತಂದೊಡ್ಡಿಲ್ಲ’ ಎಂದು ಸ್ಥಳೀಯರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.