ಹಾಸನ: ವಿಶ್ವದದಲ್ಲಿ ಭೂಮಿ ಒಂದು ಪುಟ್ಟ ನೀಲಿ ಚುಕ್ಕೆ. ನಾವು ನಕ್ಷತ್ರಗಳ ದೂಳಿನಿಂದ ಬಂದವರು ಎಂಬ ಅರಿವು ಮೂಡಿದಾಗ ಪರಿಸರದ ಮೇಲಿನ ಕಾಳಜಿ ಹಾಗೂ ವಿಜ್ಞಾನಪರ ಕುತೂಹಲ ಬೆಳೆಯುತ್ತದೆ’ ಎಂದು ವಿಜ್ಞಾನ ಸಂವಹನಕಾರ ಅಹಮದ್ ಹಗರೆ ಹೇಳಿದರು.

ಇತ್ತೀಚೆಗೆ ತಾಲ್ಲೂಕಿನ ಕಟ್ಟಾಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಬ್ರಹ್ಮಾಂಡದ ಅನಂತ ಪಯಣ: ನಮ್ಮ ಮನೆಯಂಗಳದಿಂದ ಕಪ್ಪುಕುಳಿಯವರೆಗೆ’ ಎಂಬ ವಿಶೇಷ ವಿಜ್ಞಾನ ಸಂವಾದ ಹಾಗೂ ಪಿಪಿಟಿ ಪ್ರಸ್ತುತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

90 ನಿಮಿಷ ನಡೆದ ಸಂವಾದದಲ್ಲಿ, ವಿದ್ಯಾರ್ಥಿಗಳನ್ನು ಕಾಲ್ಪನಿಕ ರಾಕೆಟ್ ಮೂಲಕ ಬಾಹ್ಯಾಕಾಶ ಪಯಣಕ್ಕೆ ಕರೆದೊಯ್ದ ಹಗರೆ, ಭೂಮಿಯ ವಾತಾವರಣದ ಪದರಗಳು, ಸೌರವ್ಯೂಹದ ಗ್ರಹಗಳ ವೈಶಿಷ್ಟ್ಯ, ನಕ್ಷತ್ರಗಳ ಹುಟ್ಟು–ಸಾವು (ಸೂಪರ್ನೋವಾ) ಹಾಗೂ ಬ್ರಹ್ಮಾಂಡದ ನಿಗೂಢ ರಹಸ್ಯ ಕಪ್ಪುಕುಳಿ (ಬ್ಲ್ಯಾಕ್ಹೋಲ್) ಕುರಿತು ಸರಳ ಹಾಗೂ ಆಕರ್ಷಕವಾಗಿ ವಿವರಿಸಿದರು.

ಬಿಜಿವಿಎಸ್ ಹಾಸನ ತಾಲ್ಲೂಕು ಸಮಿತಿ ಅಧ್ಯಕ್ಷ ಡಾ.ಎಚ್.ಜಿ. ಮಂಜುನಾಥ್ , ಇಕೋ ಕ್ಲಬ್ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹಸಿರು ಹೊದಿಕೆಯ ಮಹತ್ವ, ಮನುಷ್ಯನ ಚಯಾಪಚಯ ಕ್ರಿಯೆ, ದ್ಯುತಿ ಸಂಶ್ಲೇಷಣೆ ಹಾಗೂ ಸ್ವಚ್ಛತೆಯ ಅಗತ್ಯದ ಕುರಿತು ಮಾಹಿತಿ ಹಂಚಿಕೊಂಡರು.

ಮುಖ್ಯ ಶಿಕ್ಷಕ ರವೀಶ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ವಿಶ್ವನಾಥರಾವ್ ಚೌಹಾಣ್ ಮಾತನಾಡಿದರು. ಶಿಕ್ಷಕ ಅಶ್ವಾಕ್ ತಬ್ರೈಸ್, ಇಕೋ ಕ್ಲಬ್ ಮಾರ್ಗದರ್ಶಕಿ ಪೃಥ್ವಿ , ಸಣ್ಣಲಿಂಗಗೌಡ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.