ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ–3 ಹೆಮ್ಮೆಯ ಸಂಗತಿ: ಇಸ್ರೊ ವಿಜ್ಞಾನಿ ಡಾ.ಎಂ.ವಿ. ರೂಪಾ

Published 24 ಫೆಬ್ರುವರಿ 2024, 14:47 IST
Last Updated 24 ಫೆಬ್ರುವರಿ 2024, 14:47 IST
ಅಕ್ಷರ ಗಾತ್ರ

ಹಾಸನ: ಭೂಮಿಯಿಂದ 4 ಲಕ್ಷ ಕಿ.ಮೀ. ದೂರದಲ್ಲಿರುವ ಚಂದ್ರನಲ್ಲಿಗೆ ನೌಕೆಯನ್ನು ಯಶಸ್ವಿಯಾಗಿ ಕಳುಹಿಸಿರುವುದು ಮಹತ್ವದ ಕೆಲಸ. ಇದು ಭಾರತಕ್ಕೆ ಹೆಮ್ಮೆಯ ವಿಷಯ. ‌ಜೊತೆಗೆ ವಿಶ್ವದಲ್ಲಿ ಭಾರತದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಸಾಧನೆ ಮಾಡಿದ ಅಭಿಮಾನಕ್ಕೆ ಪಾತ್ರವಾಗಿದೆ ಎಂದು ಇಸ್ರೊ ವಿಜ್ಞಾನಿ ಡಾ.ಎಂ.ವಿ. ರೂಪಾ ಹೇಳಿದರು.

ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಸ್ಪೆಕ್‌ ಟಾಕ್ ಸೈನ್ಸ್ ಅಸೋಸಿಯೇಶನ್ ಆಯೋಜಿಸಿದ್ದ ‘ಸೈನ್ಸಿಯ–24’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚಂದ್ರಯಾನದ ಸಂದರ್ಭದಲ್ಲಿ ಅನೇಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಹಲವಾರು ವಿಜ್ಞಾನಿಗಳು ಶ್ರಮ ವಹಿಸಿದ್ದಾರೆ. ಚಂದ್ರನಲ್ಲಿಗೆ ರಾಕೆಟ್‌ ಉಡಾವಣೆ ಮಾಡಲಾಗಿದ್ದು, ಅಲ್ಲಿನ ನೌಕೆ ಚಂದ್ರನ ಸುತ್ತ ತಿರುಗುತ್ತ ಮಾಹಿತಿ ನೀಡುತ್ತದೆ. ಚಂದ್ರನ ಮೇಲೆ ಏನಿದೆ ಎಂಬುದನ್ನು ನೌಕೆ ತೋರಿಸುತ್ತದೆ ಎಂದರು.

3ನೇ ಚಂದ್ರಯಾನದಲ್ಲಿ ಕಾರ್ಯನಿರ್ವಹಿಸಿದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಅವರು, ಲ್ಯಾಂಡರ್ ಮತ್ತು ರೋವರ್ ಬಗ್ಗೆ ವಿವರಿಸಿದರು. 

ಅಧ್ಯಕ್ಷತೆ ವಹಿಸಿದ್ದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎ.ಜೆ. ಕೃಷ್ಣಯ್ಯ  ಮಾತನಾಡಿ, ವಿಜ್ಞಾನ– ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳ ಮಂಡನೆ ಮೂಲಕ ಹಲವಾರು ವಿಷಯಗಳ ಅಧ್ಯಯನ ನಡೆಸಿ ಚಂದ್ರನಲ್ಲಿಗೆ ನೌಕೆಯನ್ನು ಯಶಸ್ವಿಯಾಗಿ ಕಳುಹಿಸಿರುವುದು ಐತಿಹಾಸಿಕ ಕ್ಷಣ. ವಿಜ್ಞಾನಿಗಳ ಶ್ರಮ, ಮನೋಸ್ಥೈರ್ಯ ಮೆಚ್ಚುವಂಥದ್ದು ಎಂದು ತಿಳಿಸಿದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಎಚ್.ಎಸ್. ನರಸಿಂಹನ್ ಮಾತನಾಡಿ, ವಿಜ್ಞಾನಿಗಳ ಶ್ರಮ ಹಾಗೂ ಬುದ್ಧಿವಂತಿಕೆಯಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳ ಮೂಲಕ ಸಾಧನೆ ಮಾಡಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಟಾರ್ಗೆಟ್ ಪಿಯುಸಿ ಕಾಲೇಜು ಪ್ರಾಚಾರ್ಯ ಡಾ.ಎನ್. ಸತ್ಯನ್, ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಸ್ಪೆಕ್‌ ಟಾಕ್ ಸೈನ್ಸ್ ಅಸೋಸಿಯೇಶನ್ ಅಧ್ಯಕ್ಷ ಛಾಯಾಂಕ್‌, ಸಹ ಪ್ರಾಧ್ಯಾಪಕ ಪ್ರದ್ಯುಮ್ನ, ವಿವಿಧ ಶಾಲೆ, ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT