ರಾಮನಾಥಪುರ (ಕೊಣನೂರು): ಇಲ್ಲಿನ ಸುಬ್ರಹ್ಮಣ್ಯಸ್ವಾಮಿ ಸನ್ನಿಧಿಯಲ್ಲಿರುವ ಶಕ್ತಿದೇವತೆ ಹೊಸಳಿಗಮ್ಮ ದೇವಿಗೆ ಸಾವಿರಾರು ಈಡುಗಾಯಿ ಸೇವೆ ನೆರವೇರಿಸಲಾಯಿತು.

ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಷಷ್ಠಿ ರಥೋತ್ಸವ ಹಾಗೂ ತುಳು ಷಷ್ಠಿ ರಥೋತ್ಸವದ ನಂತರ ದೇವಾಲಯದ ಒಳಾಂಗಣದಲ್ಲಿರುವ ದೇವಿಗೆ ವಿಶೇಷದ ಪೂಜೆ ಸಲ್ಲಿಸಿ ಈಡುಗಾಯಿ ಹಾಕಲಾಯಿತು.

ದೇವಿಗೆ ಪಂಚಾಮೃತ, ಅಭಿಷೇಕ, ಮಹಾ ಮಂಗಳಾರತಿ ವೇದಘೋಷ, ಪೂಜಾ ಕೈಂಕರ್ಯದ ನಂತರ ಈಡುಗಾಯಿ ಸೇವೆ ನಡೆಯಿತು. ನೆರೆದಿದ್ದ ಭಕ್ತರಿಗೆ ಪ್ರಸಾದ ನೀಡಲಾಯಿತು.

ದೇವಾಲಯದ ಪಾರುಪತ್ತೇಗಾರ ರಮೇಶ್ ಭಟ್ ಉಭಯ ರಥೋತ್ಸವಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳನ್ನು ತಿಳಿಸಿದರು.

ಅರ್ಚಕರಾದ ಶ್ರೀಭಾರತಿ ರಮಣಾಚಾರ್, ರಾಘವೇಂದ್ರ ಭಟ್, ಶ್ರೀನಾಥ್, ಕಾರ್ತೀಕ್, ಚಂದ್ರಮೋಹನ್, ತ್ರಿವಿಕ್ರಮ್ ಮತ್ತು ಭಕ್ತ ವೃಂದದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.