ಹಾಸನದಲ್ಲಿ ತಂಪೆರೆದ ಮಳೆ
ಹಾಸನ: ನಗರ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಭಾನುವಾರ ಸಾಧಾರಣ ಮಳೆ ಸುರಿಯಿತು.
ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ತುಂತುರು ಮಳೆಯಾಯಿತು. ಸಂಜೆ ಕೆಲ ಹೊತ್ತು ಜೋರು ಸುರಿಯಿತು. ಸತ್ಯಮಂಗಲ, ಸಾಲಗಾಮೆ, ಕಂದಲಿ, ನಿಟ್ಟೂರು, ಹನುಮಂತಪುರ, ದುದ್ದ ಭಾಗದಲ್ಲಿ ಹದ ಮಳೆಯಾಗಿ, ವಾತಾವರಣ ತಂಪಾಗಿತ್ತು. ಬೇಲೂರು, ಅರೇಹಳ್ಳಿ, ಅರಕಲಗೂಡಿನಲ್ಲಿ ಉತ್ತಮ ಮಳೆಯಾಗಿದೆ.
ಭಾನುವಾರ ಬೆಳಿಗ್ಗೆವರೆಗಿನ 24 ಗಂಟೆಯಲ್ಲಿ ದಾಖಲಾದ ಹೋಬಳಿವಾರು ಮಳೆ ವರದಿ: ಸಕಲೇಶಪುರ ತಾಲ್ಲೂಕಿನ
ಬೆಳಗೋಡು 2 ಸೆಂ.ಮೀ, ಹಾನಬಾಳು, 2.3 ಸೆಂ.ಮೀ. ಹೊಳೆನರಸೀಪುರ 1.8 ಸೆಂ.ಮೀ, ಆಲೂರು ತಾಲ್ಲೂಕಿನ ಕುಂದೂರು 2.7 ಸೆಂ.ಮೀ ಮಳೆ ಸುರಿದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.