ಹಾಸನ: ನವೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಶೇಕಡಾ 700 ರಷ್ಟು ಅಧಿಕ ಮಳೆಯಾದ ಕಾರಣ ಜಿಲ್ಲೆಯಲ್ಲಿ 50,817 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈವರೆಗೆ 24,306 ರೈತರ ಖಾತೆಗೆ ₹10.93 ಕೋಟಿ ಪರಿಹಾರ ಧನ ಪಾವತಿಸಲಾಗಿದೆ.

ಕಟಾವು ಹಂತದಲ್ಲಿದ್ದ ರಾಗಿ 39,141 ಹೆಕ್ಟೇರ್, 10,115 ಹೆಕ್ಟೇರ್ ಮುಸುಕಿನ ಜೋಳ, 1,551ಹೆಕ್ಟೇರ್ ಭತ್ತ ಹಾಗೂ 10 ಹೆಕ್ಟೇರ್ ಕಡಲೆ ಬೆಳೆ ಹಾನಿಯಾಗಿತ್ತು.

ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಪೂರ್ಣಗೊಳಿಸಿದೆ. ಈಗಾಗಲೇ ಪರಿಹಾರ ತಂತ್ರಾಂಶದಲ್ಲಿ ಸುಮಾರು 1,66,963 ರೈತರು ಹಾಗೂ 33,679 ಹೆಕ್ಟೇರ್ ಕೃಷಿ ಬೆಳೆಗಳ ಹಾನಿಯ ವಿವರವನ್ನು ಅಪಲೋಡ್ ಮಾಡಲಾಗಿದೆ.

ಬೆಳೆ ಹಾನಿ ಸಂಭವಿಸಿ, ಅರ್ಜಿ ಸಲ್ಲಿಸದ ರೈತರು ಪಹಣಿ,ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್ ಪ್ರತಿಯೊಂದಿಗೆ ಹತ್ತಿರದ ರೈತ ಸಂಪರ್ಕಕೇಂದ್ರ ಅಥವಾ ಕಂದಾಯ ಇಲಾಖೆಗೆ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.