ದೊಡ್ಡತಪ್ಪಲೆ ಬಳಿ ನಿರಂತರ ಭೂಕುಸಿತ: ಶಿರಾಡಿ ಮಾರ್ಗದ ಸಂಚಾರ ಅಸ್ತವ್ಯಸ್ತ
ಲಾರಿಯಲ್ಲೇ ಅಡುಗೆ, ಊಟ
ಜಾನೇಕೆರೆ ಆರ್. ಪರಮೇಶ್
Published : 3 ಆಗಸ್ಟ್ 2024, 8:20 IST
Last Updated : 3 ಆಗಸ್ಟ್ 2024, 8:20 IST
ಫಾಲೋ ಮಾಡಿ
Comments
ಆನೇಮಹಲ್ ಬಳಿ ಹೆದ್ದಾರಿಯಲ್ಲಿ ನಿಂತಿರುವ ಲಾರಿಯಲ್ಲಿಯೇ ಚಾಲಕ ಅಡುಗೆ ಮಾಡುತ್ತಿರುವುದು.
2017 ರಿಂದ ಇದೇ ಪಾಡು
‘ಪ್ರತಿ ವರ್ಷದ ಮಳೆಗಾಲದಲ್ಲಿ ದೋಣಿಗಾಲ್ ಹಾಗೂ ದೊಡ್ಡತಪ್ಪಲೆ ಬಳಿ ಗುಡ್ಡ ಕುಸಿಯುವುದು ದಿನಗಟ್ಟಲೆ ವಾರಗಟ್ಟಲೆ ಕೊನೆಗೆ ತಿಂಗಳುಗಟ್ಟಲೆ ಸಂಚಾರ ಬಂದ್ ಆಗಿದ್ದು ಈಗಲೂ ಇದೇ ಸಮಸ್ಯೆ ಮುಂದುವರಿದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ ಆಗಿದೆ’ ಎಂದು ಚಾಲಕರು ಅಲವತ್ತಿಕೊಳ್ಳುತ್ತಿದ್ದಾರೆ. ‘ಹಾಸನ–ಬಿ.ಸಿ. ರೋಡ್ ನಡುವೆ ಚತುಷ್ಪಥ ಕಾಮಗಾರಿ ಪ್ರಾರಂಭಗೊಂಡಿದ್ದು 2017ರಲ್ಲಿ. ನಾಲ್ಕು ಪಥಕ್ಕಾಗಿ ಮರಗಳನ್ನು ಕಡಿದು ಗುಡ್ಡಗಳನ್ನು ಬಗೆದರು. ಪ್ರಾರಂಭದಲ್ಲಿ ಗುತ್ತಿಗೆ ಪಡೆದಿದ್ದ ಐಸೋಲೆಕ್ಸ್ ಕಂಪನಿ ಬ್ಯಾಂಕ್ ದಿವಾಳಿಯಾಗಿ ರಾಜ್‌ಕಮಲ್ ಬಿಲ್ಡರ್‌ಗೆ ಉಪ ಗುತ್ತಿಗೆ ನೀಡಿತು. 2019ರ ವರೆಗೆ ಯಾವುದೇ ಕಾಮಗಾರಿಗಳು ಆಗಲೇ ಇಲ್ಲ. ಈಗ ಕಾಮಗಾರಿಯಿಂದ ಸಮಸ್ಯೆ ಆಗುತ್ತಿದೆ’ ಎನ್ನುವ ಆಕ್ರೋಶ ಅವರದ್ದು.
ಅವೈಜ್ಞಾನಿಕ ಕಾಮಗಾರಿ
ರಾಜಧಾನಿ ಬೆಂಗಳೂರು ಹಾಗೂ ಇತರೆ ರಾಜ್ಯಗಳನ್ನು ಬಂದರು ನಗರ ಮಂಗಳೂರಿಗೆ ಸಂಪರ್ಕಿಸಲು ಇದೊಂದು ಪ್ರಮುಖ ಹೆದ್ದಾರಿಯಾಗಿದೆ. ಚಾರ್ಮಾಡಿ ಹಾಗೂ ಸಂಪಾಜೆ ಘಾಟ್ ಮಾರ್ಗಗಳು ಕಿರಿದಾಗಿರುವುದರಿಂದ ಸರಕು ಸಾಗಣೆ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕು. ಇಂತಹ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪ್ರಾಧಿಕಾರ ಹಾಗೂ ಗುತ್ತಿಗೆದಾರ ರಾಜ್‌ಕಮಲ್ ಕಂಪನಿ ಅವೈಜ್ಞಾನಿಕವಾಗಿ ಮಾಡುತ್ತಿದ್ದು ಮಳೆಗಾಲದಲ್ಲಿ ಈ ಮಾರ್ಗದ ಸಂಚಾರಕ್ಕೆ ಸಂಚಕಾರ ತಂದೊಡ್ಡಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದಾರೆ.